ನ. 28: ಪೆರುವಾಜೆ ದೇವಸ್ಥಾನದಿಂದ ಕೇರ್ಪಡ ದೇವಸ್ಥಾನಕ್ಕೆ ಉತ್ಸವ ಮೂರ್ತಿ ಆಗಮನ

0

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಈ ಹಿಂದೆ ನಡೆದ ಪ್ರಶ್ನಾಚಿಂತನೆಯ ಪ್ರಕಾರ ಕಂಡುಬಂದಂತೆ ಶ್ರೀ ಕ್ಷೇತ್ರ ಪೆರುವಾಜೆಯಲ್ಲಿರುವ ಕೇರ್ಪಡ ದೇವಸ್ಥಾನಕ್ಕೆ ಸಂಬಂಧಪಟ್ಟ ಉತ್ಸವ ಮೂರ್ತಿಯನ್ನು ನ. 28ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸ್ವೀಕರಿಸಿ, ಬೆಳ್ಳಾರೆ ನಿಂತಿಕಲ್ಲು ಮಾರ್ಗವಾಗಿ ಮೆರವಣಿಗೆ ಮೂಲಕ ಕರೆತರಲಾಗುವುದು.

ಆ ಪ್ರಯುಕ್ತ ಕೇರ್ಪಡ ದೇವಸ್ಥಾನದಲ್ಲಿ ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿರುವುದು. ಬೆಳಿಗ್ಗೆ 7:00ಗೆ ದೇವತಾ ಪ್ರಾರ್ಥನೆ ಮಹಾಗಣಪತಿ ಹೋಮ ದುರ್ಗಾ ಹೋಮ, ಶಕ್ತಿ ದಂಡಕ ಮಂಡಲ ಪೂಜೆ ನಡೆದು, ಬಳಿಕ ಉತ್ಸವ ಮೂರ್ತಿಯನ್ನು ಸ್ವೀಕರಿಸಿ ಅನುಜ್ಞಾ ಕಲಶ ಪೂಜೆ, ಅನುಜ್ಞಾ ಪ್ರಾರ್ಥನೆ, ಅನುಜ್ಞಾ ಕಲಶ, ಅಭಿಷೇಕ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿರುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ದೇವಳದ ಪ್ರಕಟಣೆ ತಿಳಿಸಿದೆ.