ಸುಬ್ರಹ್ಮಣ್ಯ: ದ್ವಿತೀಯ ದರ್ಜೆ ಗುಮಾಸ್ತ ರವಿರಾಮ ಕೋಡಿಂಬಾಳ ನಿವೃತ್ತಿ

0

ಎಸ್ ಎಸ್ ಪಿ ಯು ಕಾಲೇಜು ಸುಬ್ರಹ್ಮಣ್ಯ ಇದರ ಪ್ರೌಢಶಾಲಾ ವಿಭಾಗದ ದ್ವಿತೀಯ ದರ್ಜೆ ಗುಮಾಸ್ತ ರವಿರಾಮ ಕೋಡಿಂಬಾಳ ನ.30 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
1983 ರಲ್ಲಿ ಕಾಲೇಜಿನ ಪ್ರಯೋಗಶಾಲಾ ಸಹಾಯಕರಾಗಿ ಕೆಲಸಕ್ಕೆ ಸೇರಿದ ಇವರು 1984ರಲ್ಲಿ ಪ್ರೌಢಶಾಲಾ ವಿಭಾಗದ ಕಚೇರಿ ಸಹಾಯಕರಾಗಿ ನೇಮಕಗೊಂಡರು. ಬಳಿಕ 2018 ರಲ್ಲಿ ದ್ವಿತೀಯ ದರ್ಜೆ ಗುಮಾಸ್ತರಾಗಿ ಮುಂಭಡ್ತಿ ಪಡೆದರು. ಕಡಬ ತಾಲೂಕು ಕೋಡಿಂಬಾಲ ದಿ। ಸುಬ್ರಾಯ ನಾಯ್ಕ ಮತ್ತು ದಿ। ಲಕ್ಷ್ಮಿ ದಂಪತಿಗಳ ಪುತ್ರರಾಗಿರುವ ಇವರ ಪತ್ನಿ ಮೀನಾಕ್ಷಿ ಗೃಹಿಣಿ.