ಗ್ರಾಮ ವಾಸ್ತವ್ಯದಲ್ಲಿ ತಹಶೀಲ್ದಾರ್ ಮೂಲಕ ರಸ್ತೆಗೆ ಅನುದಾನ ನೀಡಲು ಸಚಿವರಿಗೆ ಮನವಿ

0

ಪೆರುವಾಜೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮೂಲಕ ತಾಲೂಕಿನ ಶಾಸಕರು ಹಾಗೂ ಸಚಿವರಾದ ಅಂಗಾರ ಅವರಿಗೆ ದುರ್ಗಾ ನಗರದಿಂದ ಪೆರುವಾಜೆ ಪಂಚಾಯತ್ ಸಂಪರ್ಕ ರಸ್ತೆ, ನಾಗನ ಮಜಲು ರಸ್ತೆ, ಶಾಂತಿ ಮೂಲೆ ರಸ್ತೆ, ಆಲಂತಡ್ಕ,ದೇರ್ನಡ್ಕ ರಸ್ತೆ,ಬಜ ರಸ್ತೆಗೆ ಡಿಸೆಂಬರ್ 15 ರ ಮೊದಲು ಅನುದಾನ ನೀಡಲು ಪೆರುವಾಜೆ ವಾರ್ಡ್ 3 ರ ಗ್ರಾಮಸ್ಥರು ಮನವಿ ಮಾಡಿದ್ದು ಈ ರಸ್ತೆಗಳು ಅಭಿವೃದ್ಧಿ ಕಾಣದೆ ಹಲವು ವರುಷಗಳು ಕಳೆದಿದೆ.

ಜನತೆಯ ಓಡಾಟ ಕ್ಕೆ ತುಂಬಾ ತೊಂದರೆಯಾಗುತ್ತಿದೆ ಎಂದು ಗ್ರಾಮ ಪಂಚಾಯತ್ ಸದಸ್ಯ ಸಚಿನ್ ರಾಜ್ ಶೆಟ್ಟಿ ತಿಳಿಸಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಗ್ರಾಮಸ್ಥರ ಸಭೆ ನಡೆಸಿ ಮುಂದಿನ ತೀರ್ಮಾನ ಜನತೆಯ ಹಿತದೃಷ್ಟಿಯಿಂದ ಕೈಗೊಳ್ಳಲು ತೀರ್ಮಾನಿಸಲಾಗುವುದು.