
ಅಲೆಕ್ಕಾಡಿ ಜನಾರ್ಧನ ಪೂಜಾರಿ ಮತ್ತು ಅವರ ಮಕ್ಕಳ ಮಾಲಕತ್ವದ ಹರ್ಷ ಕಾಂಪ್ಲೆಕ್ಸ್ ಮತ್ತು ಶ್ರೀ ಲಕ್ಷ್ಮಿ ಎಂಟರ್ಪ್ರೈಸಸ್ ನವಂಬರ್ ೨೫ರಂದು ಉದ್ಘಾಟನೆಗೊಂಡಿತು.


ಸವಣೂರು ಶ್ರೀ ವಿದ್ಯಾ ರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈಯವರು ಹರ್ಷ ಕಾಂಪ್ಲೆಕ್ಸ್ ಉದ್ಘಾಟಿಸಿ, ಶಿಕ್ಷಣದೊಂದಿಗೆ ಕೃಷಿಯು ಬೇಕು. ಅದರೊಟ್ಟಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಮಾಡಿ ನಾವು ಮಾನಸಿಕ ಸಿದ್ಧತೆ ಮಾಡಿಕೊಂಡು ಬೆಳೆದು ಊರಿನ ದೇವಾಲಯ, ಮಂದಿರ, ಶಾಲೆಗಳಿಗೆ ಸಹಕಾರಿಯಾಗಿ ನಾವು ಬೆಳೆದರೆ ಅಭಿವೃದ್ಧಿ ಹೊಂದಬಹುದು ಎಂದು ಹೇಳಿದರು.

ಸಭಾ ಕಾರ್ಯಕ್ರಮದಲ್ಲಿ ದೇವರಕಾನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಪಿ. ರಾಮಚಂದ್ರ ಭಟ್ ದೇವಸ್ಯ ದೀಪ ಪ್ರಜ್ವಲನೆ ಮಾಡಿ ಶುಭ ಹಾರೈಸಿದರು. ಬಾಳಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸವಿತಾ ಗುರುರಾಜ್ ಚಾಕೋಟೆಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ, ಗ್ರಾಮ ಪಂಚಾಯತ್ ಅಧ್ಯಕ್ಷೆ ಕು. ಜಾನಕಿ ಮುರುಳ್ಯ, ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಸಂತ ಹುದೇರಿ, ಹರ್ಷ ಕಾಂಪ್ಲೆಕ್ಸ್ ಮಾಲಕ ಜನಾರ್ದನ ಪೂಜಾರಿ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ಕಾಂಪ್ಲೆಕ್ಸ್ ಗುತ್ತಿಗೆದಾರರಾದ ವಿಶ್ವನಾಥ ಪೂಜಾರಿ ಬೆಳ್ಳಾರೆಯವರನ್ನು ಗುರುತಿಸಿ ಸನ್ಮಾನಿಸಲಾಯಿತು.

ಬೆಳಿಗ್ಗೆ ಗಣಹೋಮ, ಲಕ್ಷ್ಮಿ ಪೂಜೆ ವೈದಿಕ ಕಾರ್ಯಕ್ರಮಗಳು ನಡೆಯಿತು. ವೇದಮೂರ್ತಿ ಪ್ರಶಾಂತ್ ಪರ್ಲತ್ತಾಯರವರು ವೈದಿಕ ಕಾರ್ಯಕ್ರಮ ನಡೆಸಿಕೊಟ್ಟರು. ವೃದ್ಧಿ ಕಾಂಪ್ಲೆಕ್ಸ್ ಮಾಲಕ ವೆಂಕಪ್ಪ ಗೌಡ ಆಲಾಜೆ, ಸುಶಾಂತ್ ಅಲೆಕ್ಕಾಡಿ, ದೀಕ್ಷಾ ಸುಮಂತ್, ಸವಿತಾ ಸುಶಾಂತ್, ಸುಮಂತ್ ಅಲೆಕ್ಕಾಡಿ ವೀಳ್ಯ ನೀಡಿ ಅತಿಥಿಗಳನ್ನು ಬರಮಾಡಿಕೊಂಡರು. ಪ್ರದೀಪ್ ರೈ ಎಣ್ಮೂರು ಕಾರ್ಯಕ್ರಮ ನಿರೂಪಿಸಿದರು. ದೀಕ್ಷಾ ಸುಮಂತ್ ಪ್ರಾರ್ಥಿಸಿದರು. ಸುಮಂತ್ ಅಲೆಕ್ಕಾಡಿ ವಂದಿಸಿದರು.







