ದುಗ್ಗಲಡ್ಕದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ, ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಸುಳ್ಯ ಲಯನ್ಸ್ ಕ್ಲಬ್ ನಿಂದ ಆಯೋಜನೆ

0

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಹಾಗೂ ಲಯನ್ಸ್ ಕ್ಲಬ್ ಸುಳ್ಯ ಇದರ ಸಂಯುಕ್ತ ಆಶ್ರಯದಲ್ಲಿ ದುಗಲಡ್ಕದ ದುಗ್ಗಲಾಯ ದೇವಸ್ಥಾನ ಸಮಿತಿ, ಮಿತ್ರ ಯುವಕ ಮಂಡಲ ಕೊಯಿಕುಳಿ,ಕುರಲ್ ತುಳುಕೂಟ ದುಗ್ಗಲಡ್ಕ, ಅಯ್ಯಪ್ಪ ಭಜನಾ ಮಂದಿರ ಸಮಿತಿ ದುಗ್ಗಲಡ್ಕ, ಹಾಲು ಸೊಸೈಟಿ ದುಗ್ಗಲಡ್ಕ, ದುಗ್ಗಲಾಯ ಮಹಿಳಾ ಸೇವಾ ಸಂಘ, ಶಿವಾಜಿ ಯುವ ವೃಂದ,ದುಗ್ಗಲಾಯ ಯುವ ಸೇವಾ ಸಂಘ, ಸರಕಾರಿ ಪ್ರೌಢಶಾಲೆ ದುಗ್ಗಲಡ್ಕ, ಅಂಗನವಾಡಿ ಕೇಂದ್ರ ದುಗ್ಗಲಡ್ಕ, ಧರ್ಮಸ್ಥಳ ಗ್ರಾ. ಯೋಜನೆ ಒಕ್ಕೂಟ ಇದರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಸಲಹೆ ಮತ್ತು ಚಿಕಿತ್ಸಾ ಶಿಬಿರ ಇಂದು ದುಗ್ಗಲಡ್ಕ ಪ್ರೌಢಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷೆ ರೂಪ ಶ್ರೀ ಜೆ. ರೈ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಲಯನ್ಸ್ ವಲಯಾಧ್ಯಕ್ಷ ಗಂಗಾಧರ ರೈ ಸೋಣಂಗೇರಿ ನೆರವೇರಿಸಿದರು.

ವೇದಿಕೆಯಲ್ಲಿ ಸುಳ್ಯ ಲಯನ್ಸ್ ಕ್ಲಬ್‌ ಕಾರ್ಯದರ್ಶಿ ದೀಪಕ್ ಕುತ್ತಮೊಟ್ಟೆ, ಕೋಶಾಧಿಕಾರಿ ಡಾ.ಲಕ್ಷ್ಮೀಶ ಕೆ.ಎಸ್., ಪ್ರೌಢಶಾಲಾ ಮುಖ್ಯ ಶಿಕ್ಷಕ ಸುರೇಶ್ ಕುಮಾರ್, ಕುರಲ್ ತುಳುಕೂಟದ ಸಂಚಾಲಕ ಕೆ. ಟಿ. ವಿಶ್ವನಾಥ, ದುಗ್ಗಲಾಯ ದೈವಸ್ಥಾನದ ಅಧ್ಯಕ್ಷ ಸುಂದರ ರಾವ್, ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ದಯಾನಂದ ಸಾಲಿಯಾನ್, ತುಳುಕೂಟದ ಅಧ್ಯಕ್ಷ ನವ್ಯ ದಿನೇಶ್, ಕೆವಿಜಿ ಆಯುರ್ವೇದ ಹಾಸ್ಪಿಟಲ್ ಎಕ್ಸಿಕ್ಯೂಟಿವ್ ವಿನಯ್ ಕುಮಾರ್ ಬೆದ್ರುಪಣೆ, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಹರ್ಷಿತಾ,ಡಾ‌ ಭಾಗ್ಯೇಶ್,ಡಾ. ಅವಿನಾಶ್, ಪ್ರೌಢಶಾಲಾ ಎಸ್ ಡಿಎಂಸಿ ಸದಸ್ಯೆ ಲೀಲಾ ಬಾಬು ಮಣಿಯಾಣಿ ಉಪಸ್ಥಿತರಿದ್ದರು. ಪ್ರೌಢಶಾಲಾ ವಿದ್ಯಾರ್ಥಿನಿಯರಾದ ಪ್ರತಿಕ್ಷ ಮತ್ತು ದಿವ್ಯಶ್ರೀ ಪ್ರಾರ್ಥಿಸಿದರು, ಅಧ್ಯಕ್ಷೆ ಲ. ರೂಪಶ್ರೀ ಜೆ.ರೈ ಸ್ವಾಗತಿಸಿ, ಕೋಶಾಧಿಕಾರಿ ಡಾ. ಲಕ್ಷ್ಮೀಶ ಕೆ.ಎಸ್. ವಂದಿಸಿದರು.ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ಸುಮಾರು 160ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಆರೋಗ್ಯ ತಪಾಸಣೆ ನಡೆಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.