ಕುಕ್ಕನ್ನೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನಕ್ಕೆ ನೂತನ ಕೊಡಿಮರ ಆಗಮನ

0
50

ಜಾಲ್ಸೂರು ಗ್ರಾಮದ ಕುಕ್ಕನ್ನೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನಕ್ಕೆ ನೂತನ ಕೊಡಿಮರವು ನ.26ರಂದು ವಾಹನ ಮೆರವಣಿಗೆಯ ಮೂಲಕ ಆಗಮಿಸಿತು.

p>


ಮಧ್ಯಾಹ್ನ 2 ಗಂಟೆಗೆ ದುಗಲಡ್ಕ ಬಳಿಯ ಚೆದ್ಕಾನದಿಂದ ಹೊರಟು ಗೋಂಟಡ್ಕ ಮಾರ್ಗವಾಗಿ ದುಗಲಡ್ಕ ಪೇಟೆಗೆ ಪ್ರವೇಶ ಮಾಡಿ ಮಿತ್ತಮಜಲು, ಸುತ್ತುಕೋಟೆ, ನಡುಮನೆ, ಸೋಣಂಗೇರಿ ಮುಖಾಂತರ ಕುಕ್ಕನ್ನೂರು ದೈವಸ್ಥಾನಕ್ಕೆ ಸಾಗಿ ಬಂದಿತು.


ಈ ಸಂದರ್ಭದಲ್ಲಿ ನೂರಾರು ಭಕ್ತಾದಿಗಳು ವಾಹನ ಮೆರವಣಿಗೆಯ ಮೂಲಕ ದೈವಸ್ಥಾನದವರೆಗೆ ಆಗಮಿಸಿದರು.
ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಬಾಲಕೃಷ್ಣ ಗೌಡ ನಡುಬೆಟ್ಟು, ಹಾಗೂ ಸರ್ವ ಪದಾಧಿಕಾರಿಗಳು, ಕುಕ್ಕನ್ನೂರು ಹತ್ತು ಒಕ್ಕಲು, ಸೋಣಂಗೇರಿ ಹದಿನಾರು ಒಕ್ಕಲು ಪದಾಧಿಕಾರಿಗಳು, ದೈವಸ್ಥಾನದ ಪ್ರಧಾನ ಅರ್ಚಕ ಸುಭಾಷ್ ರೈ ಕುಕ್ಕಂದೂರು ಸೇರಿದಂತೆ ನೂರಾರು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here