ಪಾಜಪಳ್ಳ ಬಳಿ ಕಾರು ಅಪಘಾತ,
ಸಣ್ಣ ಪುಟ್ಟ ಗಾಯಗಳಿಂದ ಪಾರು : ಆಸ್ಪತ್ರೆಗೆ ದಾಖಲು

0


ಕಾರು ಅಪಘಾತವಾಗಿ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾದ ಘಟನೆ ಬೆಳ್ಳಾರೆ ಸಮೀಪದ ಪಾಜಪಳ್ಳ ಬಳಿ ಇಂದು ಮುಂಜಾನೆ ಸಂಭವಿಸಿದೆ.

ಇಂದು ಮುಂಜಾನೆ ಬೆಳ್ಳಾರೆ ಸುನ್ನಿ ಸೆಂಟರ್ ನಲ್ಲಿ ನಡೆಯಲಿರುವ ಧಾರ್ಮಿಕ ಬುರ್ದಾ ಮಜ್ಲೀಸ್ ಕಾರ್ಯಕ್ರಮಕ್ಕೆಂದು ಅವರು ಇಂದ್ರಾಜೆ ಯಿಂದ ಬರುತ್ತಿದ್ದ ಸಂದರ್ಭ ಇಸ್ಲಾಮಿಕ್ ಖ್ಯಾತ ಹಾಡುಗಾರರಾದ ತ್ವಾಹ ತಂಗಲ್, ಮತ್ತು ಶಾಹಿನ್ ಬಾಬು ರವರು ಸಂಚರಿಸುತ್ತಿದ್ದ ಕಾರು ಬೆಳ್ಳಾರೆ ಸಮೀಪ ಪಾಜಪಳ್ಳ ಬಳಿ ಪಲ್ಟಿಯಾಯಿತು. ಕಾರಿನಲ್ಲಿದ್ದವರು ಅಲ್ಪಸ್ವಲ್ಪ ಗಾಯದಿಂದ ಪಾರಾಗಿದ್ದಾರೆ.
ಅಪಘಾತವಾದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜು ಗುಜ್ಜಾಗಿದ್ದು, ಕಾರಿನಲ್ಲಿದ್ದ ಶಾಹಿನ್ ಬಾಬು, ತ್ವಾಹ ತಂಗಳ್, ಹಾಗೂ ಕಾರು ಚಾಲಕ ಆಸಿಫ್, ಸೆಮಿಮ್, ಮುಝಮ್ಮಿಲ್‌ರವರು
ಸಣ್ಣ ಪುಟ್ಟ ಗಾಯದಿಂದ ಪಾರಾಗಿದ್ದಾರೆ.
ಸ್ಥಳೀಯರು ಅವರನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.