ಸುಬ್ರಹ್ಮಣ್ಯ :ಎಸ್‌ಎಸ್‌ಪಿಯು ವಿದ್ಯಾರ್ಥಿಗಳಿಂದ ಹಸಿರು ಕಾಣಿಕೆ

0

ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರೋತ್ಸವದ ಪ್ರಯುಕ್ತ ಎಸ್‌ಎಸ್‌ಪಿಯು ಕಾಲೇಜಿನಿಂದ ಹಸಿರು ಕಾಣಿಕೆಯನ್ನು ನ.23 ರಂದು ಶ್ರೀ ದೇವಳಕ್ಕೆ ಅರ್ಪಿಸಲಾಯಿತು.ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂಧಿ ವರ್ಗ ಒದಗಿಸಿದ ಸುವಸ್ತುಗಳನ್ನು ಮತ್ತು ಕಾಲೇಜಿನಲ್ಲಿ ಬೆಳೆದ ಫಲವನ್ನು ಸಿಂಗರಿಸಿದ ವಾಹನದಲ್ಲಿ ದೇವಳಕ್ಕೆ ಕೊಂಡೊಯ್ಯಲಾಯಿತು.ಸೋನಾಮಸೂರಿ ಅಕ್ಕಿ, ತೆಂಗಿನಕಾಯಿ, ಬೆಲ್ಲ, ಸಕ್ಕರೆ, ಸೀಯಾಳ, ಅಡಿಕೆ, ಬಾಳೆಗೊನೆ, ಬಾಳೆ ಎಲೆ, ಹಿಂಗಾರ, ಕುಂಬಳಕಾಯಿ, ತೊಂಡೆಕಾಯಿ, ಚೀನಿಕಾಯಿ, ಕುಂಬಳಕಾಯಿಗಳನ್ನು ಶ್ರೀ ದೇವರಿಗೆ ಅರ್ಪಿಸಲಾಯಿತು.ಸುಮಾರು ೬ ಕ್ವಿಂಟಾಲ್ ಅಕ್ಕಿ, ೨ ಕ್ವಿಂಟಾಲ್ ೮೪ ಕೆ.ಜಿ ಬೆಲ್ಲ, ೨ಕ್ವಿಂಟಾಲ್ ೫೦ ಕೆಜಿ ಸಕ್ಕರೆ, ೧೫೫೫ ತೆಂಗಿನಕಾಯಿ, ೧೨೫4 ಸೀಯಾಳ, ೩೦೦ ಅಡಿಕೆ, ಬಾಳೆಗೊನೆ ೪, ತರಕಾರಿ ೩೦ ಕೆ.ಜಿ, ೫೦ ಬಾಳೆ ಎಲೆಯನ್ನು ಅರ್ಪಿಸಲಾಯಿತು.
ಪ್ರತಿಯೊಬ್ಬ ವಿದ್ಯಾರ್ಥಿಗಳು ಈ ಮೂಲಕ ತಮ್ಮ ಮನೆಯಿಂದ ತಂದ ಸುವಸ್ತುಗಳನ್ನು ಶ್ರೀ ದೇವರಿಗೆ ಅರ್ಪಿಸಿದರು.ಅಲ್ಲದೆ ಉಪನ್ಯಾಸಕರು, ಶಿಕ್ಷಕರಿ, ಸಿಬ್ಬಂಧಿ ವರ್ಗ ಕೂಡಾ ಸೇವೆ ನೆರವೇರಿಸಿದರು.


ಪ್ರಾಚಾರ್ಯ ಸೋಮಶೇಖರ್ ನಾಯಕ್ ದೀಪ ಬೆಳಗಿದರು.ಬಳಿಕ ಶ್ರೀ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭ ಪ್ರೌಢಶಾಲಾ ಮುಖ್ಯಗುರು ಕೆ.ಯಶವಂತ ರೈ, ಹಿರಿಯ ಶಿಕ್ಷಕ ಎಂ.ಕೃಷ್ಣ ಭಟ್, ಉಪನ್ಯಾಸಕರುಗಳಾದ ಜಯಶ್ರೀ.ವಿ.ದಂಬೆಕೋಡಿ, ರೇಖಾರಾಣಿ ಸೋಮಶೇಖರ್ ಸೇರಿದಂತೆ ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂಧಿ ವರ್ಗ ಉಪಸ್ಥಿತರಿದ್ದರು. ಉಪನ್ಯಾಸಕಿ ಭವ್ಯಶ್ರೀ ಕುಲ್ಕುಂದ ದೇವತಾ ಸ್ತುತಿ ಹಾಡಿದರು.ಉಪನ್ಯಾಸಕರಾದ ರತ್ನಾಕರ.ಎಸ್, ಮನೋಜ್ ಕುಮಾರ್ ಬಿ.ಎಸ್ ಹಸಿರು ಕಾಣಿಕೆ ವ್ಯವಸ್ಥೆಯ ಜವಬ್ದಾರಿ ವಹಿಸಿಕೊಂಡಿದ್ದರು.ಹಿರಿಯ ಉಪನ್ಯಾಸಕ ಮೋಹನ ಗೌಡ ಸೇವಾ ರೂಪದಲ್ಲಿ ಟಿಪ್ಪರ್ ವಾಹನ ಒದಗಿಸಿದ್ದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಅವರಿಗೆ ಹಸಿರು ಕಾಣಿಕೆ ಹಸ್ತಾಂತರಿಸಿದರ.ಬಳಿಕ ಶ್ರೀ ದೇವಳದಿಂದ ಪ್ರಸಾದ ನೀಡಲಾಯಿತು. ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಪಿ.ಜಿ.ಎಸ್.ಎನ್.ಪ್ರಸಾದ್, ಮನೋಹರ ರೈ, ವನಜಾ.ವಿ.ಭಟ್, ಶೋಭಾ ಗಿರಿಧರ್,ಲೋಕೇಶ್ ಮುಂಡೊಕಜೆ, ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲೋಕೇಶ್ ಬಿ.ಎನ್, ಕಾರ್ಯದರ್ಶಿ ಉಪನ್ಯಾಸಕ ರತ್ನಾಕರ.ಎಸ್ ಮತ್ತಿತರರು.