ಜಯನಗರ: ದಿ. ರಾಮಚಂದ್ರ ಭಟ್ ಸ್ಮರಣಾರ್ಥ ಪುರುಷರ ಕಬ್ಬಡಿ ಪಂದ್ಯಾಟ ಉದ್ಘಾಟನಾ ಸಮಾರಂಭ

0

ಜಯನಗರ ಶ್ರೀ ಗಜಾನನ ಭಜನಾ ಮಂದಿರ ಮತ್ತು ವಿಕ್ರಮ ಯುವಕ ಮಂಡಲ ರಿ. ಜಯನಗರ ಇದರ ಆಶಯದಲ್ಲಿ ಜಯನಗರ ಶಾಲಾ ಮೈದಾನದಲ್ಲಿ ದಿ. ರಾಮಚಂದ್ರ ಭಟ್ ಸ್ಮರಣಾರ್ಥ 60 ಕೆಜಿ ವಿಭಾಗದ ಪುರುಷರ ಕಬ್ಬಡಿ ಪಂದ್ಯಾಟದ ಉದ್ಘಾಟನಾ ಸಮಾರಂಭವನ್ನು ಪದ್ಮಶ್ರೀ ಗಿರೀಶ್ ಭಾರದ್ವಾಜ್ ದೀಪ ಬೆಳಗಿಸಿ ಉದ್ಘಾಟಿಸಿದರು.


ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಕಬಡ್ಡಿ ಅಂಕಣವನ್ನು ಉದ್ಘಾಟಿಸಿ ಚಾಲನೆಯನ್ನು ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಜಯನಗರ ಶ್ರೀ ಗಜಾನನ ಭಜನಾ ಮಂದಿರ ಅಧ್ಯಕ್ಷ ಮಾಧವ ಎ ವಹಿಸಿದ್ದರು.
ವೇದಿಕೆಯಲ್ಲಿ ಸ್ಥಳೀಯ ನಗರ ಪಂಚಾಯತಿ ಸದಸ್ಯರುಗಳಾದ ಬಾಲಕೃಷ್ಣ ಭಟ್ ಕೊಡಕೇರಿ, ಶಿಲ್ಪಾ ಸುದೇವ್, ಶಾಲಾ ದೈಹಿಕ ಶಿಕ್ಷಕ ತೀರ್ಥರಾಮ ಅಡಕಬಳೆ, ಸಮಾಜ ಸೇವಾ ರತ್ನ ಪ್ರಶಸ್ತಿ ವಿಜೇತ ಮಂಜುನಾಥ ಬಳ್ಳಾರಿ, ವಿಕ್ರಮ ಯುವಕ ಮಂಡಲದ ಅಧ್ಯಕ್ಷ ರಂಜಿತ್ ಕುಮಾರ್ ಉಪಸ್ಥಿತರಿದ್ದರು.
ಪ್ರವೀಣ್ ಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


ಜಯನಗರ ಪರಿಸರದಲ್ಲಿ ಅಪರ್ಣ ಇಂಡಸ್ಟ್ರಿಸ್ ಎಂಬ ಹೆಸರಿನ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದ ಸಮಾಜ ಸೇವಕ, ಹಾಗೂ ಅಡಿಕೆ ಸುಲಿಯುವ ಯಂತ್ರಗಳನ್ನು ತಮ್ಮ ದೇ ಶೈಲಿಯಲ್ಲಿ ಮಾರುಕಟ್ಟೆಗೆ ಪರಿಚಯಿಸಿದ ದಿ. ರಾಮಚಂದ್ರ ಭಟ್ ರವರ ನೆನಪಿಗಾಗಿ ಈ ಪಂದ್ಯಾಟವನ್ನು ನಡೆಸುತ್ತಿದ್ದು ಸುಮಾರು 30 ತಂಡಗಳು ಇಂದಿನ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟನೆ ತಿಳಿಸಿದ್ದಾರೆ. ಪಂದ್ಯಕೂಟದ ಸಮಾರೋಪ ಸಮಾರಂಭ ಇಂದು ಸಂಜೆ ನಡೆಯಲಿದೆ.