ಬೆಳ್ಳಾರೆ: ಸ್ನೇಹಿತರ ಕಲಾ ಸಂಘದ ಆಶ್ರಯದಲ್ಲಿ ಕುಣಿತ ಭಜನೋತ್ಸವದ ಆಮಂತ್ರಣ ಬಿಡುಗಡೆ

0


ಸ್ನೇಹಿತರ ಕಲಾ ಸಂಘ ಬೆಳ್ಳಾರೆ ಇದರ ವತಿಯಿಂದ ನಡೆಯುತಿದ್ದ ಕುಣಿತ ಭಜನಾ ತರಗತಿಯ ಸಮಾರೋಪ ಮತ್ತು ರಂಗ ಪ್ರವೇಶ ಕುಣಿತ ಭಜನೋತ್ಸವ ಕಾರ್ಯಕ್ರಮ ಡಿ. 14ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ನ. 27ರಂದು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಾಲಯ ಬೆಳ್ಳಾರೆಯಲ್ಲಿ ನಡೆಯಿತು.
ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ವಸಂತ ಉಲ್ಲಾಸ್, ನಿಕಟಪೂರ್ವ ಅಧ್ಯಕ್ಷರಾದ ಸಂಜಯ್ ನೆಟ್ಟಾರು, ಕೋಶಾಧಿಕಾರಿ ಮಹಾಲಿಂಗ ಕುರುಂಬುಡೇಲು, ಪೂರ್ವಾಧ್ಯಕ್ಷ ಕೊರಗಪ್ಪ ನಾಯ್ಕ ಕುರುಂಬುಡೇಲು, ಶ್ರೀನಿವಾಸ ಕುರುಂಬುಡೇಲು, ಶೇಷಪ್ಪ ಕುಲಾಲ್ ಬಸ್ತಿಗುಡ್ಡೆ, ಚೇತನ್ ಪಡ್ಪು, ವಸಂತ ನೆಟ್ಟಾರು, ಕುಸುಮ ಕುರುಂಬುಡೇಲು, ಕುಣಿತ ಭಜನೆ ತರಬೇತುದಾರಾರಾದ ಸದಾನಂದ ಆಚಾರ್ಯ ಮತ್ತು ಸುಶ್ಮಿತಾ ಹಾಗೂ ಪೋಷಕರು ಉಪಸ್ಥಿತರಿದ್ದರು.