ನ.28: ಸುಳ್ಯದ ರಥಬೀದಿಯಲ್ಲಿ ಶೈನ್ ಬ್ರೈಟ್ ಮೆನ್ಸ್ ಫ್ಯಾಶನ್ ಹೌಸ್ ಶುಭಾರಂಭ

0

ಸುಳ್ಯದ ರಥಬೀದಿಯಲ್ಲಿ ರುವ ವಿನಾಯಕ ಕಾಂಪ್ಲೆಕ್ಸ್ ನಲ್ಲಿ ಅಭಿಷೇಕ್ ರೈ ಯವರ ಮಾಲಕತ್ವದ ನೂತನ ಮೆನ್ಸ್ ಫ್ಯಾಶನ್ ಶೈನ್ ಬ್ರೈಟ್ ವಸ್ತ್ರ ಮಳಿಗೆಯು ನ.28 ರಂದು ಶುಭಾರಂಭ ಗೊಳ್ಳಲಿರುವುದು. ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ ರವರು ಉದ್ಘಾಟಿಸಲಿರುವರು. ಮುಖ್ಯ ಅಭ್ಯಾಗತರಾಗಿ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗುರುದತ್ ನಾಯಕ್ ಸುಳ್ಯ, ನಿವೃತ್ತ ಯೋಧ ನಾರಾಯಣ ನಾಯ್ಕ್ ಅರಂಬೂರು, ದೇರಣ್ಣ ರೈ ಪುತ್ರಕಲಾ,ಅಮ್ಮು ರೈ ಅರಂಬೂರು,ಶ್ರೀಮತಿ ಸುಂದರಿ ರೈ , ಶಿವರಾಮ ರೈ ಉಪಸ್ಥಿತರಿರುವರು. ಹುಡುಗರ ಹೊಸ ಹೊಸ ವಿನ್ಯಾಸದ ಫ್ಯಾಶನ್ ಉಡುಪುಗಳು ಲಭ್ಯವಿರುವುದಾಗಿ ಮಾಲಕರು ತಿಳಿಸಿದರು.