ಕನಕಮಜಲು: ಶ್ರೀ ಗುರುದೇವ ಲಲಿತಕಲಾ ಅಕಾಡೆಮಿಯ ವತಿಯಿಂದ ಮೇದಿನಿ ಉತ್ಸವ, ಎರಡು ದಿನಗಳ ನೃತ್ಯಕಲರವಕ್ಕೆ ವರ್ಣರಂಜಿತ ತೆರೆ

0

ಮಂಡ್ಯ ಮೈಸೂರು ಶ್ರೀ ಗುರುದೇವ ಲಲಿತಕಲಾ ಅಕಾಡೆಮಿಯ ವತಿಯಿಂದ ಮೂರ್ಜೆ ಮುತ್ತಣ್ಣ ಗೌಡ ಮತ್ತು ಶ್ರೀಮತಿ ನಳಿನಿ ಮುತ್ತಣ್ಣ ಸ್ಮರಣಾರ್ಥ ಗ್ರಾಮೀಣ ಪ್ರದೇಶಗಳಲ್ಲಿ ಶಾಸ್ತ್ರೀಯ ನೃತ್ಯ ಕಲಾ ಪ್ರಕಾರಗಳ ಜಾಗೃತಿಗಾಗಿ ಮೇದಿನಿ ಉತ್ಸವವವು ಕನಕಮಜಲಿನ ಕನಕಕಲಾ ಗ್ರಾಮದಲ್ಲಿ ನ.26 ಮತ್ತು ನ.27ರಂದು ಜರುಗಿದ್ದು, ಎರಡು ದಿನಗಳ ನೃತ್ಯಕಲರವಕ್ಕೆ ವರ್ಣರಂಜಿತ ತೆರೆ ಎಳೆಯಲಾಯಿತು.
ಕಾರ್ಯಕ್ರಮವನ್ನು ತೂಗುಸೇತುವೆಗಳ ಸರದಾರ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರು ದೀಪಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು. ಮೂರ್ಜೆ ಮೂರ್ಕಜೆ ನಂದರವಂಶ ಒಕ್ಕಲಿಗ ಗೌಡ ತರವಾಡು ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಗೋಪಾಲಕೃಷ್ಣ ಗೌಡ ಮೂರ್ಜೆ ಅವರು ಅಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ತಾ.ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ಗುಣವತಿ ಕೊಲ್ಲಂತಡ್ಕ, ಪುತ್ತೂರು ಎಸ್.ಡಿ.ಪಿ. ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್ ವ್ಯವಸ್ಥಾಪಕ ನಿರ್ದೇಶಕ ಡಾ. ಹರಿಕೃಷ್ಣ ಪಣಾಜೆ, ಕನಕಮಜಲು ಗ್ರಾ.ಪಂ. ಅಧ್ಯಕ್ಷ ಶ್ರೀಧರ ಕುತ್ಯಾಳ ಉಪಸ್ಥಿತರಿದ್ದು ,ಶುಭಹಾರೈಸಿದರು.

ನ.27ರಂದು ಸಮಾರೋಪ ಸಮಾರಂಭದಲ್ಲಿ ಗುರುದೇವ ಲಲಿತಕಲಾ ಅಕಾಡೆಮಿಯ ಕಲಾ ನಿರ್ದೇಶಕಿ ಡಾ. ಚೇತನ ರಾಧಾಕೃಷ್ಣ ಪಿ.ಎಂ. ಅವರು ಅಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಅಡ್ಕಾರು ವಿನೋಬನಗರ ಶ್ರೀ ಗಣೇಶ್ ಕ್ಯಾಶ್ಯೂಸ್ ನ ಶ್ರೀಮತಿ ಪದ್ಮಾವತಿ ಉಪೇಂದ್ರ ಕಾಮತ್, ಜೇನುಕೃಷಿ ತಜ್ಞ ಕುಮಾರ್ ಪೆರ್ನಾಜೆ, ಕನಕಮಜಲು ಯುವಕ ಮಂಡಲದ ಅಧ್ಯಕ್ಷ ಚಂದ್ರಶೇಖರ ನೆಡಿಲು, ಕನಕಮಜಲಿನ ಸ್ವರ್ಣ ಮಹಿಳಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಸುಶೀಲ ಅವರು ಉಪಸ್ಥಿತರಿದ್ದು ಶುಭಹಾರೈಸಿದರು.
ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ವಿವಿಧ ಭರತನಾಟ್ಯ, ಶಾಸ್ತ್ರೀಯ ಕಲಾ ನೃತ್ಯ ಪ್ರಕಾರಗಳು ಪ್ರದರ್ಶನಗೊಂಡವು.

ಶ್ರೀ ಗುರುದೇವ ಲಲಿತಕಲಾ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕರಾದ ರಾಧಾಕೃಷ್ಣ ಮೂರ್ಜೆ ಹಾಗೂ ಕಲಾ ನಿರ್ದೇಶಕಿ ಶ್ರೀಮತಿ ಡಾ. ಚೇತನಾ ರಾಧಾಕೃಷ್ಣ ಮೂರ್ಜೆ ಅವರು ಕಾರ್ಯಕ್ರಮವನ್ನು ಸಂಘಟಿಸಿದರು.