ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಜಾತ್ರೋತ್ಸವ ಆರಂಭ

0


ಕಳಂಜ ಗ್ರಾಮದ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ನ. 28ರಿಂದ ಡಿ. 2ರ ತನಕ ಬ್ರಹ್ಮ ಶ್ರೀ ಕೆ.ಯು. ಪದ್ಮನಾಭ ತಂತ್ರಿ‌ ನೀಲೇಶ್ವರರವರ ನೇತೃತ್ವದಲ್ಲಿ ಜರಗಲಿದೆ.
ನ. 28ರಂದು ಸಂಜೆ ವಿವಿಧ ವೈದಿಕ ಕಾರ್ಯಗಳು, ಹೊರೆಕಾಣಿಕೆ ಸ್ವೀಕಾರ ನಡೆಯಿತು. ನ. 29ರಂದು ಷಷ್ಠಿ ಮಹೋತ್ಸವ ನಡೆಯಲಿದ್ದು, ಪೂ. ಗಣಪತಿ ಹೋಮ, ಚಂಡಿಕಾ‌ ಹೋಮ, ವಿವಿಧ ವೈದಿಕ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

ರಾತ್ರಿ ಮಹಾಪೂಜೆ, ನೇರಳತ್ತಾಯ ಮತ್ತು ಪರಿವಾರ ದೈವಗಳ ನೇಮೋತ್ಸವ ಜರಗಲಿದೆ. ನ. 30ರಂದು ಬೆಳಿಗ್ಗೆ ರಕ್ತೇಶ್ವರಿ ದೈವದ ತಂಬಿಲ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ರಂಗಪೂಜೆ, ರಕ್ತೇಶ್ವರಿ ದೈವದ ನೇಮ ನಡೆಯಲಿದೆ. ಡಿ. 1ರಂದು ರಾತ್ರಿ ಉಳ್ಳಾಕುಳು ದೈವದ ನೇಮ, ಡಿ. 2ರಂದು ಬೆಳಿಗ್ಗೆ 8.30ರಿಂದ ಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ಭೋಜನ ನಡೆಯಲಿದೆ. ನ. 28ರಂದು ರಾತ್ರಿ ಶ್ರೀ ವಿಷ್ಣು ಮಹಿಳಾ ಭಜನಾ‌ ಮಂಡಳಿ ಕಳಂಜ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ನ. 29ರಂದು ಪೂ.‌ 10ರಿಂದ ಶ್ರೀ ಧರ್ಮಶಾಸ್ತಾ ಭಜನಾ ಮಂಡಳಿ ಪಿಲಿಕಜೆಯವರಿಂದ ಭಜನಾ ಕಾರ್ಯಕ್ರಮ, ಸಂಜೆ 7ರಿಂದ ಶ್ರೀಮದ್ ಭಗವದ್ಗೀತಾ ಗೀತಜ್ಞಾನ ಯಜ್ಞ ಪಾರಾಯಣ ತಂಡ ಬಾಳಿಲ ಇವರಿಂದ ಗೀತಪಾರಾಯಣ ಮತ್ತು ಸಾಯಿನಾಮ‌ ಸಂಕೀರ್ತನೆ ನಡೆಯಲಿದೆ. ನ.‌ 30ರಂದು ಪೂ. 11ರಿಂದ ಶ್ರೀ ದೇವಿ ಬಳಗ ಚೊಕ್ಕಾಡಿಯವರಿಂದ ಭಜನಾ ಕಾರ್ಯಕ್ರಮ ಸಂಜೆ 7.30ರಿಂದ ಕಳಂಜ ಯುವಕ ಮಂಡಲ ಪ್ರವರ್ತಿತ ಶ್ರೀ ಮಂಜುನಾಥ ಭಜನಾ ಮಂಡಳಿ ಕೋಟೆ ಮುಂಡುಗಾರು ಇವರಿಂದ ನೃತ್ಯ ಭಜನೆ ಮತ್ತು ಡಿ. 1ರಂದು ಸಂಜೆ 7.30ರಿಂದ ಯುವಕ ಮಂಡಲ ಕಳಂಜ ಇದರ ಹವ್ಯಾಸಿ ಕಲಾವಿದರಿಂದ ಉಮೇಶ್ ಶೆಟ್ಟಿ ಉಬರಡ್ಕ ನಿರ್ದೇಶನದಲ್ಲಿ ಕದಂಬ ಕೌಶಿಕೆ ಯಕ್ಷಗಾನ ಬಯಲಾಟ ನಡೆಯಲಿದೆ.