ಶ್ರೀಮತಿ ಪುಷ್ಪಾವತಿ ಅರಂಬೂರು ನಿಧನ

0

ಆಲೆಟ್ಟಿ ಗ್ರಾಮದ ಅರಂಬೂರು ಮನೆತನದ ದಿ.ಶಾಂತಪ್ಪ ಗೌಡ ರವರ ಪತ್ನಿ ಶ್ರೀಮತಿ ಪುಷ್ಪಾವತಿ ಅರಂಬೂರು ರವರು ತನ್ನ ಸ್ವಗೃಹದಲ್ಲಿ ನ.28 ರಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಪೋಲಿಸ್ ಉದ್ಯೋಗಿ ಉದಯ್ ಅರಂಬೂರು, ಉಲ್ಲಾಸ್ ಅರಂಬೂರು, ಪುತ್ರಿಯರಾದ ಶ್ರೀಮತಿ ಶೋಭಾ, ಶ್ರೀಮತಿ ರೇಖಾ, ಸೊಸೆಯಂದಿರಾದ ಶ್ರೀಮತಿ ಪವಿತ್ರ, ಶ್ರೀಮತಿ ಸಯನಾ, ಅಳಿಯಂದಿರಾದ ಯೋಗೀಶರಾಮ ಗುಂಡ್ಯ, ಚಂದ್ರಶೇಖರ, ಸಹೋದರ ಭರತ ಗೌಡ ಕುಡೆಕಲ್ಲು ಮತ್ತು ಸಹೋದರಿಯನ್ನು ಹಾಗೂಕುಟುಂಬಸ್ಥರನ್ನು ,ಬಂಧು ವರ್ಗದವರನ್ನು ಅಗಲಿದ್ದಾರೆ.