ಮೊಗರ್ಪಣೆ : ವಿದ್ಯುತ್ ತಂತಿಗಳಲ್ಲಿ ಹಬ್ಬಿಕೊಂಡಿರುವ ಕಾಡು ಬಳ್ಳಿಗಳು, ಕಂಡು ಕಾಣದ ಸ್ಥಿತಿಯಲ್ಲಿ ಮೆಸ್ಕಾಂ ಇಲಾಖೆ

0
49

ಸುಳ್ಯ ಮೊಗರ್ಪಣೆ ವೆಂಕಟರಮಣ ಸೊಸೈಟಿ ಮುಂಭಾಗ ಸುಳ್ಯ ನಗರದ ವಿದ್ಯುತ್ ಸಂಪರ್ಕಿಸುವ ತಂತಿಗಳಲ್ಲಿ ಕಾಡು ಬಳ್ಳಿಗಳು ಆವರಿಸಿಕೊಂಡು ಅಪಾಯದ ಮುನ್ಸೂಚನೆಯನ್ನು ನೀಡುತ್ತಿದೆ. ವಿದ್ಯುತ್ ತಂತಿಗಳಲ್ಲಿ ಹಸಿರು ತೋರಣಗಳಿಂದ ಸಿಂಗರಿಸಿರುವ ರೀತಿಯಲ್ಲಿ ಕಾಣುತ್ತಿದ್ದು ರಸ್ತೆಯಲ್ಲಿ ಓಡಾಡುವ ಘನವಾಹನಗಳಿಗೆ ಸಿಲುಕುವ ಅಪಾಯ ಕಾಡುತ್ತಿದೆ.
ಮಾಣಿ ಮೈಸೂರು ಹೆದ್ದಾರಿಯಾದ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ನೂರಾರು ಘನವಾಹನಗಳು ಸಂಚರಿಸುತ್ತಿದ್ದು ಅನಾಹುತ ಉಂಟಾಗುವ ಮೊದಲೇ ಇದನ್ನು ಸರಿಪಡಿಸಬೇಕಾಗಿದೆ.

p>

ಈ ರಸ್ತೆಯಲ್ಲಿ ದಿನಕ್ಕೆ ಹಲವಾರು ಅಧಿಕಾರಿಗಳು ಸಂಚರಿಸುತ್ತಿದ್ದು ಕಂಡು ಕಾಣದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಹೇಳಿಕೊಳ್ಳುತ್ತಿದ್ದಾರೆ. ಸಂಬಂಧಪಟ್ಟವರು ಕೂಡಲೇ ಇತ್ತ ಗಮನ ಹರಿಸಬೇಕಾಗಿದೆ.

LEAVE A REPLY

Please enter your comment!
Please enter your name here