ಕನಕಮಜಲು ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ನಾರಾಯಣ ಬೊಮ್ಮೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಕರುಣಾಕರ ರೈ ಕುಕ್ಕಂದೂರು ಅವಿರೋಧ ಆಯ್ಕೆ

0

ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ನಾರಾಯಣ ಬೊಮ್ಮೆಟ್ಟಿ ಹಾಗೂ ನೂತನ ಉಪಾಧ್ಯಕ್ಷರಾಗಿ ಕರುಣಾಕರ ರೈ ಕುಕ್ಕಂದೂರು ಅವರು ಅವಿರೋಧವಾಗಿ ಆಯ್ಕೆಯಾದರು.

ಒಪ್ಪಂದದಂತೆ ಸಹಕಾರಿ ಸಂಘದ ಪ್ರಥಮ ಎರಡೂವರೆ ವರ್ಷದ ಅವಧಿಗೆ ಡಾ. ಗೋಪಾಲಕೃಷ್ಣ ಭಟ್ ಅವರು ಅಧ್ಯಕ್ಷರಾಗಿದ್ದು, ಒಪ್ಪಂದದ ಪ್ರಕಾರ ಅಧ್ಯಕ್ಷತೆಗೆ ರಾಜೀನಾಮೆ ಸಲ್ಲಿಸಿದ್ದರು.
ಇದೀಗ ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಪ್ರಸ್ತುತ ಉಪಾಧ್ಯಕ್ಷರಾಗಿದ್ದ ನಾರಾಯಣ ಬೊಮ್ಮೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು,
ಉಪಾಧ್ಯಕ್ಷರಾಗಿ ನಿರ್ದೇಶಕರಾಗಿರುವ ಸಹಕಾರಿ ಧುರೀಣ ಕರುಣಾಕರ ರೈ ಕುಕ್ಕಂದೂರು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಸುಳ್ಯ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಯಂ. ಅವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ, ಸಹಕಾರದ ಸಂಘದ ನಿರ್ಗಮಿತ ಅಧ್ಯಕ್ಷ ಡಾ. ಗೋಪಾಲಕೃಷ್ಣ ಭಟ್ ಕಾಟೂರು, ನಿರ್ದೇಶಕರುಗಳಾದ ಶ್ರೀಕೃಷ್ಣ ಭಟ್ ನೆಡಿಲು, ಸುಖೇಶ್ ಅಡ್ಕಾರುಪದವು, ಮಹೇಶ್ವರ ಕಾರಿಂಜ, ಸೀತಾರಾಮ ಮಠ, ಶೇಷಪ್ಪ ನಾಯ್ಕ ಕಜೆಗದ್ದೆ, ಗಣೇಶ್ ಅಂಬಾಡಿಮೂಲೆ, ಶ್ರೀಮತಿ ಪ್ರೇಮಲತಾ ಪಲ್ಲತ್ತಡ್ಕ, ಶ್ರೀಮತಿ ಭಾರತಿ ಪಿ.ಕೆ. ಕಜೆಗದ್ದೆ, ಶ್ರೀಮತಿ ಸಾವಿತ್ರಿ ಕಾರಿಂಜ, ವಲಯ ಮೇಲ್ವಿಚಾರಕ ಬಾಲಕೃಷ್ಣ ಪುತ್ಯ, ಕನಕಮಜಲು ಗ್ರಾ.ಪಂ. ಅಧ್ಯಕ್ಷ ಶ್ರೀಧರ ಕುತ್ಯಾಳ, ಸಹಕಾರಿ ಸಂಘದ ಮಾಜಿ ಅಧ್ಯಕ್ಷ ವಸಂತ ಗಬ್ಬಲಡ್ಕ, ಹೇಮಂತ್ ಮಠ, ಜಗನ್ನಾಥ ಮಾಣಿಮಜಲು, ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ದೇವಕಿ ಕುದ್ಕುಳಿ, ಸದಸ್ಯೆ ಶ್ರೀಮತಿ ಶಾರದಾ ಉಗ್ಗಮೂಲೆ, ಹಾಗೂ ಸಹಕಾರಿ ಸಂಘದ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.