ದುಗ್ಗಲಡ್ಕದಲ್ಲಿ ಕುಂಬ್ಳೆ ಸುಂದರ ರಾವ್ ಅವರಿಗೆ ಶ್ರದ್ದಾಂಜಲಿ

0

ಇಂದು ನಿಧನರಾದ ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ ರಾವ್ ಅವರಿಗೆ ಶ್ರದ್ದಾಂಜಲಿ ಕಾರ್ಯಕ್ರಮವು ದುಗ್ಗಲಡ್ಕ ದುಗ್ಗಲಾಯ ಮಕ್ಕಳ ಯಕ್ಷ ಕಲಾ ಸಂಘದ ವತಿಯಿಂದ ನಡೆಯಿತು.

ಸಂಘದ ಅಧ್ಯಕ್ಷರಾದ ಯತೀಶ್ ಕುಮಾರ್ ರೈ, ಸಂಚಾಲಕರಾದ ಬಾಲಕೃಷ್ಣ ನಾಯರ್ ನೀರಬಿದಿರೆ, ಹಿಮ್ಮೇಳ ಕಲಾವಿದರಾದ ಶಶಾಂಕ್ ಎಲಿಮಲೆ, ಬಾಲಕೃಷ್ಣ ಬೊಮ್ಮಾರು, ಗಿರೀಶ್ ಕಕ್ಕೆಬೆಟ್ಟು, ಹಿರಿಯ ಯಕ್ಷಗಾನ ಕಲಾವಿದರಾದ ರಾಮಚಂದ್ರ ನಾಯ್ಕ್ ಕುಂಬೆತ್ತಿ ಬನ, ಹಾಗೂ ಯಕ್ಷಗಾನ ಕಲಾ ಸಂಘದ ಹಿರಿಯ ಕಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಯತೀಶ್ ಕುಮಾರ್ ರೈ ಮತ್ತು ಬಾಲಕೃಷ್ಣ ನಾಯರ್ ರವರು ಕುಂಬ್ಳೆ ಸುಂದರ ರಾವ್ ಕುರಿತು ನುಡಿ ನಮನ ಸಲ್ಲಿಸಿದರು.