ಸುಬ್ರಹ್ಮಣ್ಯ: ರಥಬೀದಿಯಲ್ಲಿ ಬೀದಿ ನಾಯಿಗಳ ಕಾಟ, ಭಕ್ತಾದಿಗೆ ಕಚ್ಚಿದ ಬೀದಿ ನಾಯಿ, ಚಿಕಿತ್ಸೆಗೂ ಬೇಕು ದೂರದ ಪ್ರಯಾಣ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು ಭಕ್ತಾದಿಗಳಿಗೆ, ವಾಹನ ಸವಾರರಿಗೆ ತೊಂದರೆ ಉಂಟಾಗಿದೆ. ಸುಬ್ರಹ್ಮಣ್ಯದಲ್ಲಿ ಆಸ್ಪತ್ರೆಯ ವ್ಯವಸ್ಥೆಯೂ ಇಲ್ಲದೆ ತೊಂದರೆಯೂ ಹೆಚ್ಚಾಗಿದೆ.

ಇಂದು ಬೆಳಗ್ಗೆ ದೇವಸ್ಥಾನ ದೊಳಗೆ ಭಕ್ತಾದಿಯೋರ್ವರಿಗೇ ನಾಯಿ ಕಚ್ಚಿದ ಘಟನೆ ವರದಿಯಾಗಿದ್ದು, ಬಳಿಕ ರವಿಕಕ್ಕೆಪದವು ಮತ್ತಿತರರು ಸೇರಿ ಕಡಬದ ಆಸ್ಪತ್ರೆಗೆ ದಾಖಲಿಸಿದ್ದಾರೆ.


ಬೀದಿ ನಾಯಿಗಳ ತೊಂದರೆ ಬಗ್ಗೆ ಹಲವು ಭಾರಿ ಸುಬ್ರಹ್ಮಣ್ಯ ಗ್ರಾ.ಪಂ ಸಭೆಯಲ್ಲಿ ಹಾಗೂ ದೇವಸ್ಥಾನಕ್ಕೆ ಸಂಬಂಧಿಸಿದ ಸಭೆಯಲ್ಲಿ ಚರ್ಚೆಗೆ ಬಂದಿತ್ತಾದರೂ ಯಾರೋಬ್ಬರು ಇದರ ಬಗ್ಗೆ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಸ್ಥಳೀಯರಿಂದ ಅಕ್ರೋಶ ವ್ಯಕ್ತವಾಗಿದೆ. ಅಲ್ಲದೆ ಸುಬ್ರಹ್ಮಣ್ಯ ಸರ್ಕಾರಿ ಆಸ್ಪತ್ರೆಯಲ್ಲೂ 24×7 ಸೇವೆಗಳಿಲ್ಲದೆ ತುರ್ತು ಸಂದರ್ಭದಲ್ಲಿ ದೂರದ ಕಡಬ ಕ್ಕೆ ತೆರಳ ಬೇಕಾಗಿದ್ದು ಭಾರಿ ತೊಂದರೆ ಉಂಟಾಗಿದೆ.