ತಾಲೂಕಿನಲ್ಲಿ ಚರ್ಮ ಗಂಟು ರೋಗ ಶಂಕಿತ ಪ್ರಕರಣ ಪತ್ತೆ, ಮುಂದಿನ ಆದೇಶದವರೆಗೆ ಜಾನುವಾರುಗಳ ಸಾಗಾಟಕ್ಕೆ ನಿರ್ಬಂಧ, ಜಾನುವಾರುಗಳನ್ನು ಮೇಯಲು ಬಿಡದಂತೆ ವೈದ್ಯಾಧಿಕಾರಿ ಸಲಹೆ

0
195

p>

ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು, ಆಲೆಟ್ಟಿ, ಕುಕ್ಕುಜಡ್ಕ, ಕನಕಮಜಲು, ಅಜ್ಜಾವರ ಗ್ರಾಮಗಳಲ್ಲಿ ಜಾನುವಾರುಗಳಿಗೆ ಚರ್ಮ ಗಂಟು ರೋಗ ಇರುವುದು ಪತ್ತೆಯಾಗಿದೆ. ಈ ಜಾನುವಾರುಗಳ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದು ಬಂದು ಬಳಿಕವಷ್ಟೇ ಚರ್ಮ ಗಂಟು ರೋಗವೇ ಎಂದು ತಿಳಿಯಲಾಗುವುದು. ಅಲ್ಲಿಯವರೆಗೆ ಇದು ಶಂಕಿತ ಪ್ರಕರಣ. ಈಗ ಕಂಡು ಬಂದಿರುವ ಪ್ರಕರಣಗಳು ಮೇಲ್ನೋಟಕ್ಕೆ ಚರ್ಮ ಗಂಟು ರೋಗದಂತೆ ಇದೆ. ಎಂದು ಸುಳ್ಯ ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ ಡಾ.ನಿತಿನ್ ಪ್ರಭು ತಿಳಿಸಿದ್ದಾರೆ.


ಉಬರಡ್ಕ ಮಿತ್ತೂರು, ಆಲೆಟ್ಟಿ, ಕುಕ್ಕುಜಡ್ಕ, ಕನಕಮಜಲು, ಅಜ್ಜಾವರ ಗ್ರಾಮಗಳಲ್ಲಿ ಒಂದೊಂದು ಜಾನವಾರುಗಳಲ್ಲಿ ಪ್ರಕರಣ ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯ ವರೆಗೆ ಮುಂದಿನ ಆದೇಶದ ವರೆಗೆ ಜಾನವಾರುಗಳನ್ನು ಸಾಗಾಟ ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ಮತ್ತು ಜಾನುವಾರು ಸಾಕುವವರು ತಮ್ಮ ಜಾನುವಾರುಗಳನ್ನು ಮನೆಯಲ್ಲಿ ಕಟ್ಟಿ ಹಾಕಿಯೇ ಸಾಕಬೇಕು, ಮೇಯಲು ಬಿಡಬಾರದು ಎಂದು ಅವರು ವಿನಂತಿಸಿಕೊಂಡಿದ್ದಾರೆ. ಚರ್ಮ ಗಂಟು ರೋಗದ ಕುರಿತು ಸಂಶಯ ಇದ್ದರೆ ತಕ್ಷಣ ಸುಳ್ಯ ಪಶುಸಂಗೋಪನಾ ಇಲಾಖೆಯನ್ನು ಸಂಪರ್ಕಿಸಬೇಕೆಂದು ಅವರು ಕೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here