ಸುಬ್ರಹ್ಮಣ್ಯ ವಲಯದ ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷರಾಗಿ ಮಾಧವ ಚಾಂತಾಳ ಆಯ್ಕೆ

0

ಸುಬ್ರಹ್ಮಣ್ಯ ವಲಯದ ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷರಾಗಿ ಮಾಧವ ಚಾಂತಾಳ ಅವರು ಆಯ್ಕೆಯಾಗಿದ್ದಾರೆ. ನ.28 ರಂದು ಹರಿಹರ ಪಲ್ಲತ್ತಡ್ಕ ಸುವಿಧಾ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಮಾಧವ ಚಾಂತಾಳ ಅವರನ್ನು ವಲಯಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ಸುಬ್ರಹ್ಮಣ್ಯ ವಲಯದ ನಿಕಟಪೂರ್ವ ಅಧ್ಯಕ್ಷರಾದ ಸತೀಶ್ ಕೂಜುಗೋಡು, ಕೆ.ಪಿ ಗಿರಿಧರ, ಭಜನಾ ಪರಿಷತ್ ಕಾರ್ಯದರ್ಶಿ ಸತೀಶ್ ಟಿ.ಎನ್, ಜನಜಾಗೃತಿ ವೇದಿಕೆಯ ಸದಸ್ಯರಾದ ಮಣಿಕಂಠ ಕಟ್ಟ, ಚಂದ್ರಶೇಖರ ಕೊಂದಾಳ, ಸಂಯೋಜಕರು ಹಾಗೂ ಸಿಬ್ಬಂದಿಗಳು, ಸೇವಾಪ್ರತಿನಿಧಿಗಳು, ಭಜನಾ ಪರಿಷತ್ ಸದಸ್ಯರುಗಳು ಉಪಸ್ಥಿತರಿದ್ದರು.

(ಕುಶಾಲಪ್ಪ ಕಾಂತುಕುಮೇರಿ)