ಅರಂಬೂರು : ಧರ್ಮಾರಣ್ಯದಲ್ಲಿ ಗೋಪಾಲಕೃಷ್ಣ ಭಟ್ ರಿಗೆ ಸಾರ್ವಜನಿಕ ಅಭಿನಂದನೆ ಮತ್ತು ಸನ್ಮಾನ

0

ಸುಳ್ಯದಲ್ಲಿ ವೆರಿಗುಡ್ ಭಟ್ರು ಎಂದೇ ಕರೆಯಲ್ಪಡುವ ಗೋಪಾಲಕೃಷ್ಣ ಭಟ್ ರವರಿಗೆ ಸಾರ್ವಜನಿಕ ಅಭಿನಂದನಾ ಸಮಿತಿಯ ಆಶ್ರಯದಲ್ಲಿ ಅರಂಬೂರಿನ ಸರಳಿಕುಂಜ ಧರ್ಮಾರಣ್ಯ ಗುರುಗಣಪತಿ ಸಭಾಭವನದಲ್ಲಿ ಅಭಿನಂದನಾ ಮತ್ತು ಸನ್ಮಾನ ಸಮಾರಂಭವು ಸಾರ್ವಜನಿಕವಾಗಿ ಡಿ.11 ರಂದುನಡೆಯಲಿರುವುದಾಗಿ ಸಮಿತಿ ಗೌರವಾಧ್ಯಕ್ಷ ಡಾ. ಗಿರೀಶ್ ಭಾರದ್ವಾಜ ರವರು
ಸುಳ್ಯದಲ್ಲಿ ಡಿ.1 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ ಗಂಟೆ 9.00 ರಿಂದ ಸುಳ್ಯದ ಜ್ಯೋತಿ ವೃತ್ತದ ಬಳಿಯಿಂದ ಸನ್ಮಾನಿತರನ್ನು ವಾಹನ ಜಾಥಾದೊಂದಿಗೆ ಮೆರವಣಿಗೆಯ ಮೂಲಕ ಧರ್ಮಾರಣ್ಯಕ್ಕೆ ಕರೆ ತರಲಾಗುವುದು.
ಬಳಿಕ‌ ಸಮಾರಂಭವು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಸುಳ್ಯ ಪೋಲಿಸ್ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ಯವರು ಭಾಗವಹಿಸಲಿದ್ದಾರೆ. ಬೆಳ್ತಂಗಡಿಯ ಬೆಳಾಲು ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಚೂಂತಾರು ರವರು ಅಭಿನಂದನಾ ಭಾಷಣ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಅಭಿನಂದನಾ ಗ್ರಂಥ “ಅಂತರಿಕ್ಷ” ವನ್ನು ಹಿರಿಯ ಉದ್ಯಮಿ ಕೃಷ್ಣ ಕಾಮತ್ ಸರಳಿಕುಂಜ ರವರು ಬಿಡುಗಡೆಮಾಡಲಿದಗದಾರೆ. ಮಧ್ಯಾಹ್ನದ ನಂತರ ಯಕ್ಷಗಾನ ತಾಳಮದ್ದಳೆ ಪ್ರದರ್ಶವಾಗಲಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಅಶೋಕ ಪ್ರಭು ಸುಳ್ಯ ರವರು ವಿವರಿಸಿದರು. ಸುಳ್ಯ ಬಿ.ಎಂ.ಎಸ್.ಅಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ, ಅಭಿನಂದನಾ ಸಮಿತಿ ಕೋಶಾಧಿಕಾರಿ ಕೆ.ಆರ್.ಕೃಷ್ಣಮೂರ್ತಿ, ಸದಸ್ಯರಾದ ಕುಮಾರಸ್ವಾಮಿ ತೆಕ್ಕುಂಜ, ಶ್ಯಾಮ್ ಭಟ್ ಸುಳ್ಯ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.