ಡಿ.16,17,18 ರಂದು ಸುಳ್ಯದಲ್ಲಿ ಕೃಷಿ ಮೇಳಕ್ಕೆ ಸಿದ್ಧತೆ : ಪೂರ್ವ ಭಾವಿ ಸಭೆ, ಕೃಷಿಕರಿಗೆ ಪ್ರಯೋಜನವಾಗುವಂತೆ ಕಾರ್ಯಕ್ರಮ ಆಯೋಜನೆ

0

ಸುಳ್ಯದಲ್ಲಿ ಡಿ.16,17 ಮತ್ತು 18 ರಂದು ಬೃಹತ್ ಕೃಷಿ ಮೇಳ ನಡೆಯಲಿದ್ದು ಸಿದ್ಧತೆಗಳ ಅವಲೋಕನಕ್ಕಾಗಿ ಪೂರ್ವ ಭಾವಿ ಸಭೆಯು ಸುಳ್ಯದ ಎ.ಪಿ.ಎಂ.ಸಿ. ಸಭಾಂಗಣದಲ್ಲಿ ನಡೆಯಿತು.

ಕೃಷಿ ಮೇಳದ ನೇತೃತ್ವ ವಹಿಸಿಕೊಂಡಿರುವ ಪ್ರಣವ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್. ಪ್ರಸಾದ್ ರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಜಿ.ಆರ್. ಪ್ರಸಾದರು‌ ಮಾತನಾಡಿ “ಕಾರ್ಯಕ್ರಮದ ರೂಪುರೇಷೆ ಮುಂದಿಟ್ಟರು. ಸಭೆಗೆ ಸಚಿವರುಗಳು, ಅಧಿಕಾರಿಗಳು ಆಗಮಿಸುತ್ತಾರೆ. ವಿಚಾರ ಸಂಕಿರಣಗಳು ನಡೆಯುವುದು. ಪ್ರಾಚ್ಯ ವಸ್ತು ಸಂಗ್ರಹಾಲಯ ಹೀಗೆ ಹಲವು ವಿಚಾರಗಳು ನಡೆಯಲಿದ್ದು ಯಶಸ್ಸಿಗೆ ಸಹಕಾರ ಕೋರಿದರು.

ಕೃಷಿ ಮೇಳದ ವಿವಿಧ ಸಮಿತಿಗಳ ಸಂಚಾಲಕರುಗಳಾದ ಸೋಮಪ್ಪ ನಾಯ್ಕ್, ಶರತ್ ಕುಮಾರ್, ಡಾ.ಎನ್.ಎ. ಜ್ಞಾನೇಶ್, ಸಂತೋಷ್ ‌ಜಾಕೆ, ಗುರುದತ್ ನಾಯಕ್, ಸಂತೋಷ್ ಕುತ್ತಮೊಟ್ಟೆ, ದಿನೇಶ್ ಮಡಪ್ಪಾಡಿ, ರಜತ್ ಅಡ್ಕಾರ್, ಪಿ.ಎಸ್.ಗಂಗಾಧರ್, ಲೋಕೇಶ್ ಊರುಬೈಲು, ಜಯರಾಮ ಮುಂಡೋಳಿಮೂಲೆ, ಯಶ್ವಿತ್ ಕಾಳಮ್ಮನೆ, ರಂಗನಾಥ್ ಪಿ.ಎಂ., ದೊಡ್ಡಣ್ಣ ಬರೆಮೇಲು, ಶೈಲೇಶ್ ಅಂಬೆಕಲ್ಲು, ದೀಪಕ್ ಕುತ್ತಮೊಟ್ಟೆ, ಹರೀಶ್ ರೈ ಉಬರಡ್ಕ ಭಾಗವಹಿಸಿದ್ದರು. ಕೃಷಿ ಮೇಳದ ಯಶಸ್ಸಿಗಾಗಿ ಮಾಡಿಕೊಂಡಿರುವ ಸಿದ್ಧತೆಯ ಕುರಿತು ಸಂಚಾಲಕರು ವಿವರ ನೀಡಿದರು.

ರೈತ ಉತ್ಪಾದಕ ಸಮಿತಿಯ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್ ಕಾರ್ಯಕ್ರಮ ನಿರೂಪಿಸಿದರು. ಪ್ರಣವ ಸಹಕಾರ ಸಂಘದ ರಂಜಿತ್ ಅಡ್ತಲೆ ಸಹಕರಿಸಿದರು.