ಹಿರಿಯ ಕಾದಂಬರಿಗಾರ್ತಿ ಜಯಮ್ಮ ಚೆಟ್ಟಿಮಾಡರಿಗೆ ತೌಳವ ಸಿರಿ ಪ್ರಶಸ್ತಿ

0

ಕರಾವಳಿ ಲೇಖಕಿಯರ ವಾಚಕಿಯರ ಸಂಘ(ರಿ.) ಮಂಗಳೂರು ಇದರ ವತಿಯಿಂದ ಡಿ.4 ರಂದು ಮಂಗಳೂರಿನ ಸುಧೀಂದ್ರ ಆಡಿಟೋರಿಯಂನಲ್ಲಿ ನಡೆಯುವ ಮಹಿಳಾ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಡಾ.ಸುನೀತಾ ಶೆಟ್ಟಿ ಮುಂಬೈ ಪ್ರಾಯೋಜಿತ ದತ್ತಿನಿಧಿ “ತೌಳವ ಸಿರಿ” ಪ್ರಶಸ್ತಿಗೆ ಸುಳ್ಯದ ಹಿರಿಯ ಕಾದಂಬರಿಗಾರ್ತಿ, ಸಾಹಿತಿ ಜಯಮ್ಮ ಚೆಟ್ಟಿಮಾಡರವರು ಆಯ್ಕೆಯಾಗಿದ್ದಾರೆ.
ದ.ಕ. ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಪ್ರಶಸ್ತಿ ಪ್ರದಾನ ಮಾಡುವರು. ಜಯಮ್ಮ ಚೆಟ್ಟಿಮಾಡ ಅವರು ಈಗಾಗಲೇ ಹಳಬರ ಜೋಳಿಗೆ ಸರಣಿ ಪುಸ್ತಕವನ್ನು ಪ್ರಕಟಿಸಿದ್ದು, ಅನೇಕ ಕವನ ಸಂಕಲನ, ಕಾದಂಬರಿಗಳನ್ನು ಬರೆದಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರ ಮಡಿಲಿಗೇರಿದೆ.

LEAVE A REPLY

Please enter your comment!
Please enter your name here