ಸುಳ್ಯದಲ್ಲಿ ಲಯನ್ ವಲಯ ಸಮಾವೇಶ

0

ನ.26 ರಂದು ಸುಳ್ಯ ಲಯನ್ ಸೇವಾ ಸದನದಲ್ಲಿ ವಲಯ ಸಮಾವೇಶ ಜರುಗಿತು. ವಲಯಾಧ್ಯಕ್ಷ ಲಯನ್ ಗಂಗಾಧರ್ ರೈಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಾಲಪ್ರತಿಭೆ ಕುಮಾರಿ ಪ್ರಣನ್ಯ ಕುದ್ಪಾಜೆಯವರನ್ನು ಸನ್ಮಾನಿ ಗೌರವಿಸಲಾಯಿತು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೇರಾಲು ಇಲ್ಲಿಗೆ 2 ಕಂಪ್ಯೂಟರ್ ಟೇಬಲ್‌ಗಳನ್ನು ಹಸ್ತಾಂತರಿಲಾಯಿತು. ನಿಕಟಪೂರ್ವಾಧ್ಯಕ್ಷರಾದ ಲಯನ್ ಆನಂದ್ ಪೂಜಾರಿ ಅವರು ಕೊಡುಗೆಯಾಗಿ ನೀಡಿದ ರೂ.10,000 ವನ್ನು ಪ್ರಜ್ಞಾ ಸೇವಾಶ್ರಮ ಪುತ್ತೂರು ಇಲ್ಲಿಗೆ ಹಸ್ತಾಂತರಿಸಲಾಯಿತು.

ಸುಳ್ಯ ಲಯನ್ಸ್ ವತಿಯಿಂದ ಆಯೋಜಿಸಿದ್ದ ಪೀಸ್ ಪೋಸ್ಟರ್ ಚಿತ್ರಕಲಾ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಚಿತ್ರಕಲಾ ಸ್ಪರ್ಧೆಯ ನಿರ್ಣಾಯಕರಾಗಿ ಸಹಕರಿಸಿದ ನಿವೃತ್ತ ಕಲಾ ಶಿಕ್ಷಕ ಪುರುಷೋತ್ತಮ ಮೋಂಟಡ್ಕರವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ದುಗಲಡ್ಕದಲ್ಲಿ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರದ ಯಶಸ್ಸಿಗೆ ಸಹಕರಿಸಿದ್ದ ಕೆ.ಟಿ.ವಿಶ್ವನಾಥ ಅವರನ್ನು ಸ್ಮರಣಿಕೆ ನೀಡಿ ಅಭಿನಂದಿಸಿಲಾಯಿತು. ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಲಯನ್ ನಿತ್ಯನಂದಾ ಮುಂಡೋಡಿ, 26ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಲಯನ್ ಕೆ.ಆರ್.ಗಂಗಾಧರ್ ಹಾಗೂ ಕೆ.ವಿ.ಜಿ ಸಾಧನಾ ಶ್ರೀ ಪ್ರಶಸ್ತಿ ಸ್ವೀಕರಿಸಲಿರುವ ಲಯನ್ ಪ್ರೋ| ಬಾಲಚಂದ್ರ ಗೌಡ ಇವರನ್ನು ವಲಯಾಧ್ಯಕ್ಷರು ಗೌರವಿಸಿದರು.

ಅಧ್ಯಕ್ಷೆ ರೂಪಾಶ್ರೀ ಜೆ.ರೈ ಸ್ವಾಗತಿಸಿ, ಕೋಶಾಧಿಕಾರಿ ಲಯನ್ ಡಾ.ಲಕ್ಷ್ಮೀಶ್ ವಂದಿಸಿದರು. ಕಾರ್ಯದರ್ಶಿ ದೀಪಕ್ ಕುತ್ತಮೊಟ್ಟೆ ವರದಿ ವಾಚಿಸಿದರು. ವೀಣಾ ಪ್ರಸಾದ್, ಸೂರಯ್ಯ ಸೂಂತೋಡು, ಜಾನ್ಸಿ ವೆಂಕಟ್ ಕಾರ್ಯಕ್ರಮದಲ್ಲಿ ಸಹಕರಿಸಿದರು. ಮಮತಾ ಕುಶಾಲಪ್ಪ ಕಾರ್ಯಕ್ರಮ ನಿರೂಪಿಸಿದರು. ಮೆಸ್ಕಾಂ ಅಸಿಸ್ಟೆಂಟ್ ಎಕ್ಸುಕ್ಯೂಟಿವ್ ಇಂಜಿನಿಯರ್ ಹರೀಶ್‌ರವರ ಮಕ್ಕಳಾದ ಕುಶಿತ್ ಹಾಗೂ ವಿಜಿತ್‌ರವರು ಯಕ್ಷಗಾನ ನೃತ್ಯದ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶೇಖರ್ ಮಣಿಯಾಣಿ ತಂಡದವರಿಂದ ಭಸ್ಮಾಸುರ ಮೋಹಿನಿ ಯಕ್ಷಗಾನ ಕಾರ್ಯಕ್ರಮ ನಡೆಯಿತು.