ಸುಳ್ಯ ಎನ್ನೆoಪಿಯುಸಿಯಲ್ಲಿ ಉಪನ್ಯಾಸ ಕಾರ್ಯಕ್ರಮ

0

ಆಧುನಿಕ ಜಗತ್ತಿನಲ್ಲಿ ಇಂಗ್ಲೀಷ್ ಭಾಷೆಯು ಶಿಕ್ಷಣ, ವ್ಯವಹಾರಿಕವಾಗಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಭಾಷೆಯಲ್ಲಿ ಪರಿಣತಿ ಹೊಂದುವುದರ ಮೂಲಕ ಕಾರ್ಯ ಸಾಧನೆಗೈಯಲು ಸಾಧ್ಯ ಎಂದು
ಎಂದು ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಭವ್ಯ ಪಿ.ಎಂ. ಹೇಳಿದರು.ಅವರು ಸುಳ್ಯದ ನೆಹರು ಮೆಮೋರಿಯಲ್ ಪ.ಪೂ.ಕಾಲೇಜಿನಲ್ಲಿಆಯೋಜಿಸಿದ “English for career development” ವಿಷಯದ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾoಶುಪಾಲರಾದ ಹರಿಣಿ ಪುತ್ತೂರಾಯ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ ಸಾವಿತ್ರಿ ಕೆ, ಕಾಲೇಜಿನ ಇಂಗ್ಲೀಷ್ ಉಪನ್ಯಾಸಕಿ ಪ್ರೇಮಲತ ಎ ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಅಂಬಿಕಾ ಪ್ರಾರ್ಥಿಸಿ,ವಿದ್ಯಾರ್ಥಿ ಸೂರಜ್ ಸಂದೀಪ್ ಯಾದವ್ ಸ್ವಾಗತಿಸಿ,ಉಪನ್ಯಾಸಕಿ ಪ್ರೇಮಲತ ಎ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು.ಕನ್ನಡ ಉಪನ್ಯಾಸಕಿ,ಸಾಹಿತ್ಯ ಸಂಘದ ಸಂಚಾಲಕಿ ಬೇಬಿ ವಿದ್ಯಾ ಪಿ.ಬಿ. ವಂದಿಸಿದರು.ವಿದ್ಯಾರ್ಥಿನಿ ಸಮೃದ್ಧಿ ನಿರೂಪಿಸಿದರು.