ಬೈತಡ್ಕ : ಚಿನ್ನದ ಸರ ಎಳೆದೊಯ್ದ ಆರೋಪಿ ಪೊಲೀಸ್ ವಶ

0


ವೃದ್ಧ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರವನ್ನು ನ. ೨೮ರಂದು ಬೆಳಿಗ್ಗೆ ಎಳೆದು ಪರಾರಿಯಾಗಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ.


ಮಡಿಕೇರಿ ಮೂಲದ ಆರೋಪಿಯನ್ನು ಕೇರಳದ ಕಣ್ಣೂರಿನಲ್ಲಿ ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದ್ದು, ಆರೋಪಿಯನ್ನು ಸ್ಥಳ ಮಹಜರಿಗಾಗಿ ಸರ ಎಳೆದೊಯ್ದ ಸ್ಥಳಕ್ಕೆ ಕರೆತಂದಿರುವುದಾಗಿ ತಿಳಿದುಬಂದಿದೆ.