ಜೇಸಿಐ ಪಂಜ ಪಂಚಶ್ರೀ – 12 ವಿದ್ಯಾರ್ಥಿಗಳಿಗೆ ಮೂವತ್ತು ಸಾವಿರ ರೂಪಾಯಿ ವಿದ್ಯಾರ್ಥಿವೇತನ ವಿತರಣೆ

0


ಬೆಳ್ಳಿಹಬ್ಬ ವನ್ನು ಸಂಭ್ರಮಿಸುವ ಜೇಸಿಐ ಪಂಜ ಪಂಚಶ್ರೀ ಈ ವರ್ಷ ಜೇಸಿಐ ಭಾರತದಿಂದ ಪಂಜ ಪರಿಸರದ 12 ಪ್ರತಿಭಾನ್ವಿತಾ ವಿದ್ಯಾರ್ಥಿಗಳಿಗೆ ತಲಾ ಎರಡುವರೆ ಸಾವಿರದಂತೆ ಮೂವತ್ತು ಸಾವಿರ ರೂಪಾಯಿ ವಿದ್ಯಾರ್ಥಿವೇತನವನ್ನು ನೀಡಲಾಗಿದೆ ಎಂದು ಘಟಕದ ಅಧ್ಯಕ್ಷರಾಗಿರುವ ಜೇಸಿ. ಶಿವಪ್ರಸಾದ್ ಹಾಲೆಮಜಲು ರವರು ತಿಳಿಸಿದರು. ಈ ವಿದ್ಯಾರ್ಥಿ ವೇತನವನ್ನು 9 ರಿಂದ 12ನೇ ತರಗತಿಯಲ್ಲಿ ಅಧ್ಯಯನ ಮಾಡುವ ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಸರಕಾರಿ ಪದವಿಪೂರ್ವ ಕಾಲೇಜು ಗುತ್ತಿಗಾರಿನ ಕುಮಾರಿ ವಕ್ಷಿತಾ, ಯಶ್ವಿತ್ ಸಿ ಎ , ನಿತೀಶ್ ಕೆ ಕೆ, ಬಿ ವಿ ಅಂಕಿತ, ದಿವ್ಯ ಜಿ ಪಿ, ಸಿಂಚನ್ ಬಿ ಎಸ್, ಪಿ ಬಿ ಪ್ರಜ್ವಿತ , ಪಂಜ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದ ಯಶ್ವಿತಾ ಮತ್ತು ಗ್ರೀಷ್ಮ ಎಂ ವಿ. ಕೆ ಎಸ್ ಗೌಡ ವಿದ್ಯಾ ಸಂಸ್ಥೆ ನಿಂತಿಕಲ್ಲಿನ ವಿದ್ಯಾರ್ಥಿಗಳಾದ ಮಹರೂಫ್ ಬಿ, ಕುಮಾರಿ ರಕ್ಷಾ ಹಾಗೂ ರಚನಾ ಕೆ ಸಿ ರವರ ಉಳಿತಾಯ ಖಾತೆಗೆ ವಿದ್ಯಾರ್ಥಿ ವೇತನ ಜಮೆ ಮಾಡಲಾಯಿತು. ಈ ವರ್ಷದ ವಲಯ ಅಧ್ಯಕ್ಷರಾಗಿರುವ ಜೇಸಿ. ರಾಯನ್ ಉದಯ ಕ್ರಾಸ್ತಾ ಹಾಗೂ ವಲಯ ವಿದ್ಯಾರ್ಥಿವೇತನ ನಿರ್ದೇಶಕ ಜೆಸಿ ಉದಯ ನಾಯ್ಕ್ ರವರು ಮಾರ್ಗದರ್ಶನ ನೀಡಿದರು. ಕಾಲೇಜಿನ ಪ್ರಾಂಶುಪಾಲರು ಹಾಗೂ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಮಾಹಿತಿ ನೀಡಿ ಸಹಕರಿಸಿದರು.