ಮುರುಳ್ಯ – ಎಣ್ಮೂರು ಸೊಸೈಟಿ ನೂತನ ಕಟ್ಟಡ ಸಾಧನಾ ಸಹಕಾರ ಸೌಧ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ

0
49


ಮುರುಳ್ಯ ಎಣ್ಮೂರು ಪ್ರಾ.ಕೃ.ಪ.ಸ.ಸಂಘ ನಿಂತಿಕಲ್ಲು ಇದರ ನೂತನ ಕಟ್ಟಡ ಸಹಕಾರ ಸೌಧವು ಡಿ. ೧೦ರಂದು ಲೋಕಾರ್ಪಣೆಗೈಯ್ಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯು ಇಂದು ಬಿಡುಗಡೆಗೊಂಡಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ.ಜಿ.ಎಸ್.ಎನ್. ಪ್ರಸಾದ್‌ರವರು ದೀಪ ಪ್ರಜ್ವಲಿಸಿ, ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಸಂಸ್ಥೆಯ ಅಧ್ಯಕ್ಷ ವಸಂತ ಹುದೇರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಮುರುಳ್ಯ ಹಾಲು ಸೊಸೈಟಿ ಅಧ್ಯಕ್ಷ ಅಶೋಕ್‌ಕುಮಾರ್ ಊರುಸಾಗು, ಜನತಾ ಬಜಾರ್ ಮಂಗಳೂರು ಇದರ ಮಾಜಿ ಅಧ್ಯಕ್ಷ ಪ್ರಸನ್ನ ಕೆ. ಗುಂಡಿಮಜಲು, ಪ್ರಗತಿಪರ ಕೃಷಿಕ ಬಿ. ರಾಮಕೃಷ್ಣ ಭಟ್ ಕಳತ್ತಜೆ, ಸಂಸ್ಥೆಯ ಉಪಾಧ್ಯಕ್ಷೆ ಶ್ರೀಮತಿ ಕುಸುಮಾವತಿ ಎಣ್ಮೂರುಗುತ್ತು ಮತ್ತು ನಿರ್ದೇಶಕರಾದ ರಘುನಾಥ ರೈ ಕೆ.ಎನ್. ಅಲೆಂಗಾರ, ವಸಂತ ನಡುಬೈಲು, ರೂಪರಾಜ ರೈ, ಭಾಗೀರಥಿ ಮುರುಳ್ಯ, ಶೇಖರ್ ಸಾಲ್ಯಾನ್, ರಾಜಶೇಕರ ಶೃಂಗೇರಿ, ದಿನೇಶ್ ಎಚ್. ದಿನೇಶ್ ಪಿ., ಪುರುಷೋತ್ತಮ ಆಚಾರ್ಯ, ಶ್ರೀಮತಿ ನಳಿನಿ ಎಸ್.ರೈ, ಕಾರ್ಯನಿರ್ವಹಣಾಧಿಕಾರಿ ಚಿದಾನಂದ ರೈ ಎನ್., ಪಂಜ ವಲಯ ಮೇಲ್ವಿಚಾರಕಾದ ಪ್ರದೀಪ್ ಕೆ., ನವೋದಯ ಪ್ರೇರಕ ಗಂಗಾಧರ ಪೊಳೆಂಜ, ಸಿಬ್ಬಂದಿ ವರ್ಗ, ಸದಸ್ಯರು, ಗ್ರಾಹಕರು ಉಪಸ್ಥಿತರಿದ್ದರು.

p>


ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪಿ.ಜಿ.ಎಸ್.ಎನ್. ಪ್ರಸಾದ್‌ರವರನ್ನು ಗೌರವಿಸಲಾಯಿತು. ಕಾರ್ಯನಿರ್ವಹಣಾಧಿಕಾರಿ ಚಿದಾನಂದ ರೈ ಎನ್. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ಕುಸುಮಾವತಿ ರೈ ವಂದಿಸಿದರು.

LEAVE A REPLY

Please enter your comment!
Please enter your name here