ಕೆ.ಎಸ್.ಆರ್.ಟಿ.ಸಿ ಸಿ ಸಿಬ್ಬಂದಿ ಶಿವರಾಮ ಮತ್ತು ಶಿವಪ್ಪ ನಾಯ್ಕ್ ರಿಗೆ ನಿವೃತ್ತಿ

0

ಸುಳ್ಯದ ಕೆ.ಎಸ್.ಆರ್.ಟಿ.ಸಿ 30 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದು, ಇದೀಗ ಸಂಚಾರ ನಿಯಂತ್ರಕರಾಗಿದ್ದ ಬಂಟ್ವಾಳದ ಪೆರುವಾಯಿ ಗ್ರಾಮದ ನೆಕ್ಕರೆಕಾಡು ಶಿವಪ್ಪ ನಾಯ್ಕ್ ರವರು ಹಾಗೂ 24 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿರ್ವಾಹಕರಾದ ಉಬರಡ್ಕ ಮಿತ್ತೂರು ಗ್ರಾಮದ ಮಡಿಯಾರು ಸೋಮಪ್ಪ ಗೌಡರ ಪುತ್ರ ಶಿವರಾಮರವರು ನ.30 ರಂದು ಸೇವೆಯಿಂದ ನಿವೃತ್ತಿ ಹೊಂದಿದರು. ಇವರಿಗೆ ಸುಳ್ಯ ಡಿಪೋ ದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಸಲಾಯಿತು. ಈ ಸಂದರ್ಭದಲ್ಲಿ ಡಿಪೋ ಮೆನೇಜರ್ ವಸಂತ ನಾಯ್ಕ್, ಪಾಳಿಯ ಮುಖ್ಯಸ್ಥ ಮಹಮ್ಮದ್ ಆಲಿ, ಆಡಳಿತ ಶಾಖೆಯ ಗಿರೀಶ್, ಸಂಚಾರ ನಿಯಂತ್ರಕ ಕುಶಾಲಪ್ಪ, ಜಗನ್ನಾಥ, ಇಂಧನ ಶಾಖೆಯ ತರಬೇತಿ ಬೋಧಕ ಎಂ.ಪಿ ಮಹಮ್ಮದ್, ಭದ್ರತಾ ರಕ್ಷಕ ರಂಜಿತ್, ನಿರ್ವಾಹಕ ನಾಗರಾಜ್, ವಾಸುದೇವ, ತಾಂತ್ರಿಕ ಸಿಬ್ಬಂದಿಗಳು ಮತ್ತು ಚಾಲಕ ನಿರ್ವಾಹಕರು ಉಪಸ್ಥಿತರಿದ್ದರು.