ರಸ್ತೆ ದಾಟುತ್ತಿದ್ದ ಯುವಕನಿಗೆ ಬೈಕ್ ಡಿಕ್ಕಿ, ಚಕಮಕಿ, ಇತ್ತಂಡದಿಂದ ಪೊಲೀಸ್ ದೂರು

0

ರಸ್ತೆ ದಾಟುತ್ತಿದ್ದ ಯುವಕನಿಗೆ ಬೈಕ್ ಡಿಕ್ಕಿ ಹೊಡೆದು, ಪರಸ್ಪರ ಮಾತಿನ ಚಕಮಕಿ ನಡೆದು ಇತ್ತಂಡದಿಂದ ಪೊಲೀಸ್ ದೂರು ನೀಡಿದ ಘಟನೆ ಸುಳ್ಯದ ಬಾಳೆಮಕ್ಕಿಯಲ್ಲಿ ಇಂದು ನಡೆದಿದೆ.

ಸುಳ್ಯ ಬಾಳೆಮಕ್ಕಿ ಬಳಿ ಇಂದು ಸಂಜೆ ಕುಂಕುಂ ಬಟ್ಟೆ ಅಂಗಡಿಯ ಸಿಬ್ಬಂದಿಯೋರ್ವರು ರಸ್ತೆ ದಾಟುತ್ತಿದ್ದ ಸಂದರ್ಭ ಕಾಲೇಜು ವಿದ್ಯಾರ್ಥಿಯೋರ್ವ ಚಲಾಯಿಸಿ ಕೊಂಡು ಬರುತ್ತಿದ್ದ ದ್ವಿಚಕ್ರ ವಾಹನ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಯುವಕ ರಸ್ತೆಗೆ ಬಿದ್ದರೆನ್ನಲಾಗಿದೆ.
ಈ ಸಂದರ್ಭದಲ್ಲಿ ಅಂಗಡಿಯ ಸಿಬ್ಬಂದಿ ವರ್ಗದವರಿಗೂ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿಗೂ ಮಾತಿನ ಚಕಮಕಿ ನಡೆದು ಬಟ್ಟೆ ಅಂಗಡಿಯವರು ಬೈಕಿನ ಕೀಯನ್ನು ತೆಗೆದು ತಮ್ಮ ಬಳಿ ಇರಿಸಿಕೊಂಡಿದ್ದರು ಎನ್ನಲಾಗಿದೆ.
ನಂತರ ಯುವಕ ಅಲ್ಲಿಂದ ತೆರಳಿ ಅಲ್ಪ ಸಮಯದ ಬಳಿಕ ತಮ್ಮ ಸ್ನೇಹಿತರೊಂದಿಗೆ ಬಟ್ಟೆ ಅಂಗಡಿಗೆ ಬಂದು ವಾಹನದ ಕೀಯನ್ನು ತೆಗೆದಿಟ್ಟ ವಿಷಯಕ್ಕೆ ಸಂಬಂಧಿಸಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.
ಬಳಿಕ ಇತ್ತಂಡದವರು ಸುಳ್ಯ ಪೊಲೀಸ್ ಠಾಣೆಗೆ ತೆರಳಿ ಪರಸ್ಪರ ದೂರುಗಳನ್ನು ನೀಡಿರುವುದಾಗಿ ತಿಳಿದು ಬಂದಿದೆ.