ಡಿ.21: ಬರೆಮೇಲು ಶ್ರೀ ಉದ್ಭವ ಕ್ಷೇತ್ರಕ್ಕೆ ಆದಿಚುಂಚನಗಿರಿ ಸ್ವಾಮೀಜಿಗಳ ಆಗಮನ – ಪೂರ್ವಭಾವಿ ಸಭೆ, ಸ್ವಾಮೀಜಿಯವರಿಂದ ಐಕ್ಯತಾ ಸಂದೇಶ ಮತ್ತು ಆಶೀರ್ವಚನ

0

ಐವರ್ನಾಡು ಗ್ರಾಮದ ಬರೆಮೇಲು ಶ್ರೀ ಉದ್ಭವ ತ್ರಿಶಕ್ತಿ ಸ್ವರೂಪಿನಿ ಮಹಾಕಾಳಿ ಕ್ಷೇತ್ರಕ್ಕೆ ಜಗದ್ಗುರು ಆದಿಚುಂಚನಗಿರಿ ಸಂಸ್ಥಾನದ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿಯವರು ಡಿ.21 ರಂದು ಆಗಮಿಸಲಿದ್ದು ಅವರು ಐಕ್ಯತಾ ಸಂದೇಶ ಮತ್ತು ಆಶೀರ್ವಚನ ನೀಡಲಿದ್ದಾರೆ. ಈ ಬಗ್ಗೆ ಪೂರ್ವಭಾವೀ ಸಭೆಯನ್ನು ಡಿ.02 ರಂದು ಸಂಜೆ ಶ್ರೀ ಕ್ಷೇತ್ರ ಬರೆಮೇಲಿನ ವಠಾದಲ್ಲಿ ಕ್ಷೇತ್ರದ ಧರ್ಮರಸು ಬರೆಮೇಲು ಕರುಣಾಕರ ಗೌಡರ ಉಪಸ್ಥಿತಿಯಲ್ಲಿ ನಡೆಸಲಾಯಿತು.


ಐವರ್ನಾಡು,ಬೆಳ್ಳಾರೆ,ಪೆರುವಾಜೆ ಮತ್ತು ಕೊಡಿಯಾಲ ಗ್ರಾಮಗಳನ್ನೊಳಗೊಂಡ ಭಕ್ತಾದಿಗಳು ಸೇರಿ ನಡೆಸುವ ಈ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ಸ್ವಾಮೀಜಿಗಳ ಪಾದಪೂಜೆ ಮತ್ತು ಗುರು ಕಾಣಿಕೆ ಅರ್ಪಿಸುವ ಕಾರ್ಯಕ್ರಮದಲ್ಲಿ, ಸಮರ್ಪಕ ವ್ಯವಸ್ಥೆಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಯಿತು.
ಭವ್ಯ ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಡಲಾಯಿತು. ಸಭೆಯಲ್ಲಿ, ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರ ಕೋಲ್ಟಾರ್ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ, ಗೌಡರ ಯುವ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಬೆಳ್ಯಪ್ಪ ಗೌಡ, ಉಮೇಶ ಕೆ.ಎಂ.ಬಿ, ಸತೀಶ ಎಡಮಲೆ, ತಿಮ್ಮಪ್ಪ ಫಾರೆಸ್ಟರ್, ರಾಧಾಕೃಷ್ಣ ಮಿತ್ತಮೂಲೆ, ವಿಶ್ವನಾಥ ಗೌಡ ಕಲ್ಲೆಂಬಿ, ಕಿಶನ್ ಜಬಳೆ, ಶಿವರಾಮ ಗೌಡ ನೆಕ್ರೆಪ್ಪಾಡಿ,
ಎಡಮಲೆ ಜನಾರ್ಧನ ಗೌಡ,
ಆರಿಕಲ್ಲು ಜನಾರ್ಧನ ಗೌಡ,ಗುರು ಎಡಮಲೆ, ತಿಮ್ಮಪ್ಪ ನೂಜಾಲು,ಪ್ರಮೋದ್ ನಿಡುಬೆ,ಪ್ರಮೋದ್ ಆರಿಕಲ್ಲು,ಸುಧಾಕರ ಆರಿಕಲ್ಲು,
ಮಂಜುನಾಥ ಮಡ್ತಿಲ,
ಪ್ರೇಮಚಂದ್ರ ಪ್ರೇಮ್ ಸ್ಟುಡಿಯೋ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ದಿನೇಶ್ ಮಡ್ತಿಲ ಸ್ವಾಗತಿಸಿ, ದೇವಪ್ರಸಾದ್ ಶುಂಠಿತಡ್ಕ ವಂದಿಸಿದರು.
ಕೊಡುಗೆಯ ಲೋಕಾರ್ಪಣೆ
ಕ್ಷೇತ್ರದ ಭಕ್ತಾದಿಗಳಾದ ಪ್ರಸಾದ್ ದೇವರಕಾನ ಕುಟುಂಬದವರ ಕೊಡುಗೆಯಾದ ” ಬ್ರಹ್ಮ ಪಾದ ದ್ವಾರ ಮತ್ತು ನೂಜಿ ಶ್ರೀಮತಿ ಭವಾನಿ ಹೊನ್ನಪ್ಪ ಗೌಡರ ಕುಟುಂಬದವರ ಕೊಡುಗೆ ” ವಿಷ್ಣುಪಾದ ದ್ವಾರ” ದ ಲೋಕಾರ್ಪಣೆಯನ್ನು ಶ್ರೀ ಸ್ವಾಮೀಜಿಯವರು ಮಾಡಲಿದ್ದಾರೆ.
ಬೆಳಿಗ್ಗೆ ಆರಿಕಲ್ಲಿನಿಂದ ಕುಂಭಮೇಳದೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ.
ಐವರ್ನಾಡು ಶ್ರೀ ಪಂಚಲಿಂಗೇಶ್ವರ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಸಭಾ ಕಾರ್ಯಕ್ರಮ ನಡೆದ ಬಳಿಕ
ಅಮರ ತರಂಗ ಸುಳ್ಯದವರ ” ಅಮರ ಸುಳ್ಯದ ಸಮರ ವೀರ “ಕೆದಂಬಾಡಿ ರಾಮಯ್ಯ ಗೌಡ ” ನಾಟಕ ಪ್ರದರ್ಶನ ನಡೆಯಲಿದೆ.