ಗೋಪಿನಾಥ್ ಡಿ ಯವರಿಗೆ ಎಡಮಂಗಲ ಗ್ರಾ.ಪಂ.ಗೆ ಹೆಚ್ಚುವರಿ ಕಾರ್ಯದರ್ಶಿಯಾಗಿ ನಿಯೋಜನೆ

0


ಕುಟ್ರುಪ್ಪಾಡಿ ಗ್ರಾ.ಪಂ.ನಲ್ಲಿ ಗ್ರೇಡ್ 2 ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಡಮಂಗಲ ಗ್ರಾಮದ ದಡ್ಡು ಮನೆ ಗೋಪಿನಾಥ್ ಡಿ. ಯವರಿಗೆ ಹೆಚ್ಚುವರಿಯಾಗಿ ಎಡಮಂಗಲ ಗ್ರಾ.ಪಂ.ಗೆ ಕಾರ್ಯದರ್ಶಿಯಾಗಿ ನಿಯೋಜಿಸಲಾಗಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ಕಡಬ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಯವರು ಮುಂದಿನ ಆದೇಶ ಬರುವ ತನಕ ವಾರದಲ್ಲಿ 3 ದಿವಸ ಎಡಮಂಗಲ ಗ್ರಾ.ಪಂ.ನಲ್ಲಿ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಿದ್ದಾರೆ.