ಸುಳ್ಯದ ರಾಜಧಾನಿ ಜುವೆಲರ್ಸ್ ನಲ್ಲಿ ತಿಂಗಳ ಉಚಿತ ಲಕ್ಕಿ ಕೂಪನ್ ಡ್ರಾ ಕಾರ್ಯಕ್ರಮ

0

ಸುಳ್ಯ ಖಾಸಗಿ ಬಸ್ ನಿಲ್ದಾಣ ಬಳಿ ಕಳೆದ 17 ವರ್ಷಗಳಿಂದ ಕಾರ್ಯಚರಿಸುತ್ತಿರುವ ರಾಜಧಾನಿ ಜುವೆಲರ್ಸ್ ಸಂಸ್ಥೆಯಲ್ಲಿ ಗ್ರಾಹಕರಿಗೆ ನೀಡುವ ಉಚಿತ ಕೂಪನ್ ತಿಂಗಳ ಲಕ್ಕಿ ಡ್ರಾ ಫಲಿತಾಂಶವನ್ನು ಇಂದು ಆಯ್ಕೆ ಮಾಡಲಾಯಿತು.
ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ ಅದೃಷ್ಟದ ಚೀಟಿಯನ್ನು ಆಯ್ಕೆ ಮಾಡಿದರು.
ಈ ಬಾರಿಯ ಸ್ಮಾರ್ಟ್ ಫೋನ್ ಗೆಲ್ಲುವ ಅವಕಾಶ ಸುಳ್ಯ ಜಾಲಸೂರು ಮೂಲದ ಆಯಿಷಾ ಎಂಬುವರಿಗೆ ಅದೃಷ್ಟ ಚೀಟಿ ಒಲಿಯಿತು.

ಡ್ರಾ ಫಲಿತಾಂಶದ ಆಯ್ಕೆ ಸಂದರ್ಭದಲ್ಲಿ ಸ್ಥಳೀಯ ಉದ್ಯಮಿಗಳಾದ ಅಬ್ದುಲ್ ರಜಾಕ್ ಹಾಜಿ ಶೀತಲ್, ಹಾಜಿ ಅಬ್ದುಲ್ ಹಮೀದ್ ಸಮ್ಮರ್ ಕೂಲ್, ಸಂಸ್ಥೆಯ ಮಾಲಕರಾದ ಅಬ್ದುಲ್ ರಝಕ್ ಹಾಜಿ ರಾಜಧಾನಿ, ಸ್ಥಳೀಯ ಆಟೋ ಚಾಲಕರು ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪ್ರತಿ ತಿಂಗಳು ನಮ್ಮ ಸಂಸ್ಥೆಯಲ್ಲಿ ಗ್ರಾಹಕರಿಗೆ ಸ್ಮಾರ್ಟ್ ಫೋನ್ ಗೆಲ್ಲುವ ಅವಕಾಶ ಮತ್ತು ಪ್ರತೀ ಮೂರು ತಿಂಗಳ ಡ್ರಾಪ್ ಫಲಿತಾಂಶದಲ್ಲಿ ಡೈಮಂಡ್ ನೆಕ್ಲೇಸ್ ಪಡೆಯುವ ಅವಕಾಶವಿರುತ್ತದೆ ಎಂದು ಈ ಸಂದರ್ಭದಲ್ಲಿ ಮಾಲಕರು ತಿಳಿಸಿದ್ದಾರೆ.