ಸುಳ್ಯ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

0

ಸುಳ್ಯ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘ ನಿ. ಇದರ ವತಿಯಿಂದ ಇಂದು ಸಹಕಾರಿ ಸಂಘದ ಸಭಾಂಗಣದಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಸಂಸ್ಥೆಯ ಅಧ್ಯಕ್ಷ ಐ ಇಕ್ಬಾಲ್ ಎಲಿಮಲೆ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಪ್ರಜ್ವಲ್ ನಾಯಕ್ ಸದಸ್ಯರುಗಳಾದ ಇಸ್ಮಾಯಿಲ್ ಪಡಪಿನಂಗಡಿ, ಎ ಕೆ ಹಸೈನಾರ್ ಕಲ್ಲುಗುಂಡಿ, ಜೂಲಿಯಾನ ಕ್ರಾಸ್ತಾ, ಆಮಿನ ಮಿಲಿಟರಿ ಗ್ರೌಂಡ್, ಜಾರ್ಜ್ ಡಿಸೋಜ ಹಾಗೂ ಸಂಸ್ಥೆಯ ಸಿಬ್ಬಂದಿಗಳಾದ ಪ್ರಿಯ ಡಿ’ ಸೋಜ, ಮುರಳಿಧರ, ನಳಿನಾಕ್ಷಿ ಮೊದಲದವರು ಉಪಸ್ಥಿತರಿದ್ದರು.