ಎಡಮಂಗಲ: ಬಳಕ್ಕಬೆ ಕಾಂಪ್ಲೆಕ್ಸ್ ಶುಭಾರಂಭ, ಶಾಂತಲಾ ಸ್ಟುಡಿಯೋ ಸ್ಥಳಾಂತರಗೊಂಡು ಉದ್ಘಾಟನೆ

0

ಎಡಮಂಗಲದ ಬಳಕ್ಕಬೆ ಪ್ರತಿಮಾ ಜಯರಾಮರ ಮಾಲಕತ್ವದ ಬಳಕ್ಕಬೆ ಕಾಂಪ್ಲೆಕ್ಸ್ ಡಿ. ೨ ರಂದು ಶುಭಾರಂಭಗೊಂಡು ಶಾಂತಲಾ ಸ್ಟುಡಿಯೋ 22 ವರ್ಷಗಳಿಂದ ಹಳೆಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಇದೀಗ ಸ್ಥಳಾಂತರಗೊಂಡು ಉದ್ಘಾಟನೆಗೊಂಡಿತು.
ಎಡಮಂಗಲ ದೇವಸ್ಥಾನದ ಅರ್ಚಕ ಶ್ಯಾಮ್ ಕಿಶೋರ್ ನೂಚಿಲರವರು ಗಣಹೋಮ, ಶ್ರೀ ಲಕ್ಷ್ಮಿ ಪೂಜೆ ನೆರವೇರಿಸಿದರು.
ಕಡಬದ ರಮ್ಯ ಸ್ಟುಡಿಯೋ ಮಾಲಕಿ ಲೀಲಾವತಿ ಶಿವರಾಮ ರಿಬ್ಬನ್ ಕಟ್ ಮಾಡಿ ಶುಭ ಹಾರೈಸಿದರು. ಎಡಮಂಗಲ ದೇವಸ್ಥಾನದ ಅರ್ಚಕ ಶ್ಯಾಮ್ ಕಿಶೋರ್ ವೈದಿಕ ಕಾರ್ಯಕ್ರಮ ನೆರವೇರಿಸಿದರು.


ಈ ಸಂದರ್ಭದಲ್ಲಿ ಶ್ರೀಮತಿ ನೀಲಮ್ಮ ಶಾಂತಪ್ಪ ಗೌಡ ಬಳಕ್ಕಬೆ, ಶ್ರೀಮತಿ ರೇಷ್ಮಾ ಜನಾರ್ದನ, ಅನುಪಮ ಚಂದ್ರಶೇಖರ, ಗಣ್ಯರು, ಗ್ರಾಹಕರು ಉಪಸ್ಥಿತರಿದ್ದರು.