ವಿಧಾನ ಸಭಾ ಚುನಾವಣೆ : ಪುತ್ತೂರಿನಲ್ಲಿ ಸುಳ್ಯದವರಿಗೆ ಕಾಂಗ್ರೆಸ್ ಟಿಕೆಟ್
ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಟಿ.ಎಂ. ಶಹೀದ್ ಮನವಿ

0

”ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಸುಳ್ಯದವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ನಮ್ಮ ಬೆಡಿಕೆ ಇದೆ” ಎಂದು ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ, ಬೆಳ್ತಂಗಡಿ ಉಸ್ತುವಾರಿ ಟಿ.ಎಂ. ಶಹೀದ್ ಹೇಳಿದ್ದಾರೆ.
ಡಿ.೩ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಪುತ್ತೂರಿನಲ್ಲಿ ಈ ಬಾರಿ ಸುಳ್ಯದ ನಾಯಕರಿಗೆ ಅವಕಾಶ ನೀಡಬೇಕು. ಅದು ಯಾರಿಗಾದರೂ ಆಗಬಹುದು. ಒಟ್ಟಾರೆಯಾಗಿ ಸುಳ್ಯಕ್ಕೊಂದು ಅವಕಾಶ ಸಿಗಬೇಕು ಎಂದು ಹೇಳಿದ ಅವರು,ನಾನೂ ಕೂಡಾ ಆಕಾಂಕ್ಷಿ” ಎಂದು ಹೇಳಿದರು.
ಅಲ್ಪಸಂಖ್ಯಾತರ ಕಡೆಗಣನೆ : ರಾಜ್ಯ ಮತ್ತು ಕೇಂದ್ರ ಸರಕಾರ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸ್ಕಾಲರ್ ಶಿಪ್‌ನ್ನು ರದ್ದುಗೊಳಿಸಿರುವುದು ಖಂಡನೀಯ. ಇದನ್ನು ಪುನರ್ ಪರಿಶೀಲನೆ ನಡೆಸಿ ಸ್ಕಾಲರ್ ಶಿಪ್ ಸಿಗುಂತೆ ಆಗಬೇಕು ಎಂದು ಅವರು ಒತ್ತಾಯಿಸಿದರು.


ಸರಕಾರ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರಲು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿzವೆಂದು ಹೇಳುತ್ತಿದ್ದಾರಷ್ಟೆ ಯಾವುದೇ ಯೋಜನೆಗಳನ್ನು ತರುತ್ತಿಲ್ಲ. ಶಿರವಸ್ತ್ರವನ್ನು ಕ್ಯಾಂಪಸ್‌ನಲ್ಲಿ ಬಳಸಬಾರದೆಂದು ಹೇಳಿರುವುದರಿಂದ ಹಲವು ಮಂದಿ ಅಲ್ಪಸಂಖ್ಯಾತ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸ್ಕಾಲರ್‌ಶಿಪ್ ಕೂಡಾ ಕೊಡುತ್ತಿಲ್ಲ. ಇದೆಲ್ಲದರ ವಿರುದ್ಧ ಮುಂದಿನ ದಿನದಲ್ಲಿ ದೊಡ್ಡ ಆಂದೋಲನ ನಡೆಯಲಿದೆ. ಸಮಾನ ನೀತಿ ಎಂಬ ಹೆಸರಿನಲ್ಲಿ ಅಲ್ಪಸಂಖ್ಯಾತರ ಸವಲತ್ತು ಕಡಿಗೊಳಿಸಿರುವುದು ದೇಶದ ಜಾತ್ಯಾತೀತ ಪರಂಪರೆ ಹಾಗೂ ಸಂವಿಧಾನದ ವಿರುದ್ಧದ ಕೆಲಸವಾಗಿದೆ. ಮದರಸ ಶಿಕ್ಷಣ ಸಂಸ್ಥೆಗಳಿಗೆ ವಕ್ಫ್ ಇಲಾಖೆ ಅನುದಾನ ಕಡಿತ ಮಾಡಲಾಗುತ್ತಿದೆ ಎಂದು ಅವರು ವಿವರ ನೀಡಿದರು.
ಸಂಪಾಜೆ ಕಾಂಗ್ರೆಸ್‌ನಲ್ಲಿ ರಾಜೀನಾಮೆ ವಿಚಾರವನ್ನು ಪತ್ರಕರ್ತರು ಪ್ರಶ್ನಿಸಿದಾಗ, ಎಲ್ಲ ಪಕ್ಷದಲ್ಲಿಯೂ ಕೆಲವು ಗೊಂದಲಗಳು ಇರುತ್ತದೆ. ಅದನ್ನು ಬ್ಲಾಕ್ ಅಧ್ಯಕ್ಷರು, ಕೋರ್ ಕಮಿಟಿಯವರು ಸರಿಪಡಿಸುತ್ತಾರೆ ಎಂದು ಹೇಳಿದ ಟಿ.ಎಂ. ಶಹೀದ್‌ರವರು, “ಜಿ.ಕೆ.ಹಮೀದ್‌ರವರು ಉಚ್ಛಾಟನೆಯ ಕುರಿತು ನೋ ಕಮೆಂಟ್ಸ್ – ನಾನು ಯಾರ ಪರವೂ ಇಲ್ಲ. ಕಾಂಗ್ರೆಸ್ ಪರ ಇರುವವನು. ಗ್ರಾಮ ಪಂಚಾಯತ್ ಚುನಾವಣೆಗೆ ಪಕ್ಷ ಇರುವುದಿಲ್ಲ. ಗ್ರಾಮದ ಅಭಿವೃದ್ಧಿಯ ನಿಟ್ಟಿನಲ್ಲಿ ಜಿ.ಕೆ. ಹಮೀದ್‌ರವರಿದ್ದು ಪತ್ರಿಕಾಗೋಷ್ಠಿ ನಡೆಸಿzವೆ. ಮುಂದೆಯೂ ನಡೆಸುತ್ತೇವೆ” ಎಂದು ಹೇಳಿದರು.
ಪತ್ರಿಕಾಗೋಷ್ಠೀಯಲ್ಲಿ ಸಂಪಾಜೆ ಪಂಚಾಯತ್ ಸದಸ್ಯರುಗಳಾದ ಅಬೂಸಾಲಿ, ಎಸ್.ಕೆ.ಹನೀಫ್, ನ.ಪಂ. ಸದಸ್ಯ ಶರೀಫ್ ಕಂಠಿ, ಹನೀಫ್ ಬೀಜಕೊಚ್ಚಿ ಇದ್ದರು.