ಸುಳ್ಯದ ಸ್ಪರ್ಧಿ ಗಳಿಗೆ ಕರ್ನಾಟಕ ರಾಜ್ಯ ಮುಕ್ತ ವೇಟ್ ಲಿಫ್ಟಿಂಗ್ ಚಾಂಪಿಯನ್ಷಿಪ್ ನಲ್ಲಿ ಪದಕ

0

SDM ಸ್ಪೋರ್ಟ್ಸ್ ಕ್ಲಬ್ ಉಜಿರೆ ಇವರ ಆಶ್ರಯದಲ್ಲಿ ನವೆಂಬರ್ 27 ರಿಂದ 29 ರ ವರೆಗೆ ನಡೆದ ಕರ್ನಾಟಕ ರಾಜ್ಯ ಮುಕ್ತ ವೇಟ್ ಲಿಫ್ಟಿಂಗ್ ಸ್ಪರ್ದೆಯಲ್ಲಿ ಅಭಿನಂದನ್ B S ಇವರು 73 ಕಿ ಗ್ರಾಂ ಗ್ರೂಪ್ ನ ಯೂತ್ ಸೆಕ್ಷನ್ ನಲ್ಲಿ ಕಂಚಿನ ಪದಕ ಪಡೆದಿರುತ್ತಾರೆ. ಇವರು NMPU ಕಾಲೇಜ್ ಸುಳ್ಯದಲ್ಲಿ ಪ್ರಥಮ ವರ್ಷದ ವಾಣಿಜ್ಯ ವಿಭಾಗದ ವಿಧ್ಯಾರ್ಥಿ ಯಾಗಿ ದ್ದಾರೆ. ಇವರು ಐವರ್ನಾಡು ಗ್ರಾಮದ ಬಾಂಜಿಕೊಡಿ ಯಲ್ಲಿನ ಚಾತು ಬಾಯಿ ಸದಾಶಿವ ಮತ್ತು ನಯನ ದಂಪತಿಗಳ ಪುತ್ರ .ಚಂದನ್ CP ಇವರು 102 ಕಿ ಗ್ರಾಂ ಗ್ರೂಪ್ ನ ಜೂನಿಯರ್ ಸೆಕ್ಷನ್ ನಲ್ಲಿ ಕಂಚಿನ ಪದಕ ಪಡೆದಿದ್ದು , ಇವರು NMPU ಕಾಲೇಜ್ ಸುಳ್ಯದ ಕಲಾ ವಿಭಾಗದ ದ್ವಿತೀಯ PU ವಿಧ್ಯಾರ್ಥಿ ಯಾಗಿದ್ದಾರೆ. ಇವರು ತುಮಕೂರಿನ ತುರ್ವೇಕೆರೆ ತಾಲೂಕಿನ ಬಾನಸಂದ್ರ ಗ್ರಾಮದ ಪುಟ್ಟೇಗೌಡ ಮತ್ತು ಯಶೋದ ದಂಪತಿಯ ಪುತ್ರ. ಸ್ಪರ್ಧಿಗಳಿಗೆ ಮಾಜಿ ರಾಷ್ಟ್ರೀಯ ಚಾಂಪಿಯನ್ , ವೇಟ್ ಲಿಫ್ಟರ್ ಶ್ರೀ. ಏ. ರಮೇಶ್ ಇವರು ಕ್ರೀಡಾ ಮತ್ತು ಕಲಾ ಸಂಘ ಸುಳ್ಯ ದ ಜಿಮ್ ನೇಶಿಯಂ ನಲ್ಲಿ ತರಬೇತಿ ನೀಡಿರುತ್ತಾರೆ. ಜಿಮ್ ನೇಶಿಯಮ್ ನಲ್ಲಿ ಬಾಲಕ ಬಾಲಕಿಯರಿಗೆ ತರಬೇತಿ ಉಚಿತ ವಾಗಿದ್ದು ಆಸಕ್ತರು ಮೊಬೈಲ್ ಸಂಖ್ಯೆ 9449386970 ಮೂಲಕ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿರುತ್ತಾರೆ.