ಐವರ್ನಾಡಿನಲ್ಲಿ ಸ್ವಚ್ಛ ಗ್ರಾಮಕ್ಕಾಗಿ ಮ್ಯಾರಥಾನ್ ಓಟ, ಪಂಚಾಯತ್ ವತಿಯಿಂದ ಬೃಹತ್ ಸ್ವಚ್ಛತಾ ಕಾರ್ಯಕ್ರಮ

0

ಐವರ್ನಾಡು ಗ್ರಾಮ ಪಂಚಾಯತ್, ಐವರ್ನಾಡು ಕೃಷಿ ಪತ್ರಿನ ಸಹಕಾರಿ ಸಂಘ ನಿ, ದೇರಾಜೆ ಗೆಳೆಯರ ಬಳಗ ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸ್ವಚ್ಛ ಗ್ರಾಮಕ್ಕಾಗಿ ಮ್ಯಾರಥಾನ್ ಓಟವು ಡಿ.04 ರಂದು ನಡೆಯಿತು.
ಬಾಂಜಿಕೋಡಿ ಜಂಕ್ಷನ್ ನಿಂದ ಬೆಳಿಗ್ಗೆ ಮ್ತ
ಮ್ಯಾರಥಾನ್ ಓಟ ಆರಂಭಗೊಂಡು ಐವರ್ನಾಡು ಗ್ರಾಮ ಪಂಚಾಯತ್ ಸಭಾಭವನದ ಬಳಿ ಸಂಪನ್ನಗೊಂಡಿತು.
ಓಟದಲ್ಲಿ ಪ್ರಥಮ ಬಹುಮಾನವನ್ನು ಅಭಿನಂದನ್,ದ್ವಿತೀಯ ನಿಯತ್ ಪಡೆದುಕೊಂಡರು. ಮಹಿಳೆಯರ ವಿಭಾಗದಲ್ಲಿ ಚಿತ್ರಲೇಖ, ದ್ವಿತೀಯ ಪುಷ್ಪರವರು ಪಡೆದುಕೊಂಡರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರು ಅಧ್ಯಕ್ಷತೆ ವಹಿಸಿ ಮಾತನಾಡಿ ಐವರ್ನಾಡಿನಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆ ಕೊಡುತ್ತಿದ್ದೇವೆ.ಸ್ವಚ್ಛತೆಗೆ ನಾವು ಕಟಿಬದ್ಧರಾಗಿದ್ದೇವೆ.ಮಾತೃಭೂಮಿಯನ್ನು ಸ್ವಚ್ಛವಾಗಿಡುವುದು ನಮ್ಮ ಕರ್ತವ್ಯ. ಐವರ್ನಾಡು ಗ್ರಾಮ ಮಾದರಿಯಾಗಿ ಉಳಿಯಬೇಕು ಎಂದು ಹೇಳಿ ಎಲ್ಲರ ಸಹಕಾರ ಕೋರಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ, ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು, ಪಿಡಿಒ ಶ್ಯಾಮ್ ಪ್ರಸಾದ್, ದೇರಾಜೆ ಗೆಳೆಯರ ಬಳಗದ ಅಧ್ಯಕ್ಷ ಅರುಣ್ ಗುತ್ತಿಗಾರುಮೂಲೆ ಉಪಸ್ಥಿತರಿದ್ದರು.
ಕಾರ್ಯದರ್ಶಿ ಅನಿಲ್ ದೇರಾಜೆ ಸ್ವಾಗತಿಸಿ, ಅಜಿತ್ ಐವರ್ನಾಡು ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.
ಮ್ಯಾರಥಾನ್ ಓಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಬೃಹತ್ ಸ್ವಚ್ಛತಾ ಕಾರ್ಯಕ್ರಮ

ಐವರ್ನಾಡು ಗ್ರಾಮ ಪಂಚಾಯತ್ ಹಾಗೂ ವಿವಿಧ ಸಂಘಸಂಸ್ಥೆಗಳ ವತಿಯಿಂದ ಬೃಹತ್ ಸ್ವಚ್ಚತಾ ಕಾರ್ಯಕ್ರಮವು ಬೆಳಿಗ್ಗೆ ನಡೆಯಿತು.
ಪ್ರತೀ ತಿಂಗಳ ಮೊದಲ ಆದಿತ್ಯವಾರ ನಡೆಯುವ ಸ್ವಚ್ಚತಾ ಕಾರ್ಯಕ್ರಮದಲ್ಲಿ ಹಲವಾರು ಜನರು ಪಾಲ್ಗೊಳ್ಳುತ್ತಿದ್ದಾರೆ.
ಇಡೀ ಗ್ರಾಮ ಸ್ವಚ್ಛ ಗ್ರಾಮವಾಗಬೇಕು, ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎನ್ನುವ ಪರಿಕಲ್ಪನೆಯೊಂದಿಗೆ ನಡೆಯುವ ಸ್ವಚ್ಛತಾ ಕಾರ್ಯಕ್ರಮವು ಗ್ರಾಮ ಪಂಚಾಯತ್ ವತಿಯಿಂದ ನಡೆಯುತ್ತಿದೆ.
ಐವರ್ನಾಡು ಗ್ರಾಮ ಪಂಚಾಯತ್ ಸಮೀಪದಿಂದ ನಡೆದ ಸ್ವಚ್ಛತಾ ಕಾರ್ಯಕ್ರಮವು ಬಾಂಜಿಕೋಡಿವರೆಗೆ ನಡೆಯಿತು.
ಮುಖ್ಯ ರಸ್ತೆಯ ಬದಿಯಲ್ಲಿರುವ ಕಸ,ಪ್ಲಾಸ್ಟಿಕ್,ಪ್ಲಾಸ್ಟಿಕ್ ಬಾಟಲಿಗಳು ಇನ್ನಿತರ ಕಸಗಳನ್ನು ಹೆಕ್ಕಿ ತ್ಯಾಜ್ಯ ವಿಲೇವಾರಿ ಗಾಡಿಗೆ ಹಾಕಿ ಸಾಗಿಸಲಾಯಿತು.