ಕುಸಿದು ಬಿದ್ದು ಯುವಕ ಮೃತ್ಯು

0
2539

p>

ಕುಸಿದು ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಸುಳ್ಯ ಕಸಬಾದ ಕುದ್ಪಾಜೆಯಿಂದ ಡಿ.3 ರಂದು ವರದಿಯಾಗಿದೆ.
ಕುದ್ಪಾಜೆ ಗೋಪಾಲ ಮಣಿಯಾಣಿ ಅವರ ಪುತ್ರ ಅಶೋಕ(41ವ.) ಮೃತಪಟ್ಟ ಯುವಕ.
ಇವರು ಮೆಕ್ಯಾನಿಕ್ ಕರ್ತವ್ಯ ನಿರ್ವಹಿಸುತ್ತಿದ್ದು, ಡಿ.3 ರಂದು ರಾತ್ರಿ ಮನೆಯೊಳಗೆ ನಡೆದುಕೊಂಡು ಹೋಗುತ್ತಿದ್ದಾಗ ಕುಸಿದು ಬಿದ್ದು, ತಲೆಗೆ ಗಾಯವಾಗಿ ತಕ್ಷಣ ಅವರನ್ನು ಸರಕಾರಿ ಆಸ್ಪತ್ರೆಗೆ ಕರೆತರಲಾಯಿತು.
ಪ್ರಥಮ ಚಿಕಿತ್ಸೆ ನೀಡಿದ ಸ್ವಲ್ಪ ಸಮಯದ ಬಳಿಕ ಮೃತಪಟ್ಟರೆಂದು ತಿಳಿದುಬಂದಿದೆ.
ಮೃತರು ತಂದೆ, ತಾಯಿ ಮಹಾಲಕ್ಷ್ಮೀ, ಸಹೋದರ ಕಿರಣ್, ಸಹೋದರಿ ಉಷಾ ಹಾಗೂ ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here