ಸುಳ್ಯ- ಕೊಡಿಯಾಲಬೈಲ್ -ದುಗ್ಗಲಡ್ಕ ರಸ್ತೆಯ ಕಾಂಕ್ರೀಟೀಕರಣ ಉದ್ಘಾಟನೆ

0

ಸುಳ್ಯ- ಕೊಡಿಯಾಲಬೈಲ್- ದುಗ್ಗಲಡ್ಕ ರಸ್ತೆಗೆ ಶಾಸಕರ ಅನುದಾನದಿಂದ ಬಿಡುಗಡೆಗೊಂಡ ರೂ.50ಲಕ್ಷ ಅನುದಾನದಲ್ಲಿ ಸುಮಾರು 700 ಮೀಟರ್ ಕಾಂಕ್ರೀಟೀಕರಣ ರಸ್ತೆಯ 4 ಕಡೆ ನಡೆದಿದ್ದು ಕಾಮಗಾರಿಯ ಉದ್ಘಾಟನೆ ಇಂದು ಕೊಡಿಯಾಲಬೈಲ್ ನಲ್ಲಿ ನಡೆಯಿತು.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿಜಯಕುಮಾರ್ ಕಂದಡ್ಕ ಉದ್ಘಾಟನೆ ನೆರವೇರಿಸಿ ಮಾತನಾಡಿ ಈ ಭಾಗದ ಜನರ ಬಹುಬೇಡಿಕೆಗೆ ಅನುಗುಣವಾಗಿ ಈ ಕಾಮಗಾರಿ ಪೂರ್ಣಗೊಂಡಿದ್ದು,ಮುಂದಿನ ಹಂತವಾಗಿ ಶಾಸಕರ ನಿಧಿಯಿಂದ 50ಲಕ್ಷ ವೆಚ್ಚದಲ್ಲಿ ಅತೀ ಶೀಘ್ರವಾಗಿ ಉಳಿದ 3 ಕಡೆ ಕಾಂಕ್ರೀಟೀಕರಣ ಮಾಡಲಾಗುವುದು. ಎರಡು ಕಡೆ ಸೇತುವೆ ಕಾಮಗಾರಿಗೆ ಇಲಾಖೆಯಿಂದ ಮಂಜೂರಾತಿ ದೊರೆತಿದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಉಬರಡ್ಕ ಮಿತ್ತೂರು ಗ್ರಾ.ಪಂ.ಸದಸ್ಯೆ ಶ್ರೀಮತಿ ಮಮತಾ ಕುದ್ಪಾಜೆ, ಸೀತಾನಂದ ಬೇರ್ಪಡ್ಕ,ರಾಧಾಕೃಷ್ಣ ಮಾಣಿಬೆಟ್ಟು, ಸುರೇಶ್ಚಂದ್ರ ಕಮಿಲ,ಪ್ರಭಾಕರ ಅಮೈ,ಚಂದ್ರಶೇಖರ ಗೌಡ ಮದಕ,ಲಕ್ಷ್ಮಣ ಗೌಡ ಕುದ್ಪಾಜೆ ಮೊದಲಾದವರು ಉಪಸ್ಥಿತರಿದ್ದರು.
ಮನೋಜ್ ಪಾನತ್ತಿಲ ಸ್ವಾಗತಿಸಿ, ನ ಶ್ಯಾಂ ಪಾನತ್ತಿಲ ವಂದಿಸಿದರು.