ಕಳಂಜ ಬಾಳಿಲ ಸಹಕಾರಿ ಸಂಘದ ಮಾಜಿ ನಿರ್ದೇಶಕ ಬಾಬು ಗೌಡ ಶ್ರದ್ಧಾಂಜಲಿ ಸಭೆ

0


ನ. 16ರಂದು ನಿಧನರಾದ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಮಾಜಿ ನಿರ್ದೇಶಕ ಮುಪ್ಪೇರ್ಯ ಗ್ರಾಮದ ಮುಗುಪ್ಪು ಬಾಬು ಗೌಡರಿಗೆ ಶ್ರದ್ಧಾಂಜಲಿ ಸಭೆ ಡಿ. 3ರಂದು ಮೃತರ ಸ್ವಗೃಹ ಮುಗುಪ್ಪಿನಲ್ಲಿ ನಡೆಯಿತು. ಎಡಮಂಗಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗ್ರಿ ಮೃತರಿಗೆ ನುಡಿನಮನ ಸಲ್ಲಿಸಿದರು.


ಮೃತರ ಪತ್ನಿ ಬಾಳಿಲ ಗ್ರಾ.ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ಲಲಿತಾ ಬಾಬು ಗೌಡ ಮುಗುಪ್ಪು, ಪುತ್ರರಾದ ಸನತ್ ಕುಮಾರ್ ಮುಗುಪ್ಪು, ವೆಂಕಟ್ರಮಣ ಸೊಸೈಟಿ ಕಡಬ ಶಾಖೆಯ ಉದ್ಯೋಗಿ ದೀಪ್ತಿರಾಜ್ ಮುಗುಪ್ಪು, ಪುತ್ರಿಯರಾದ ಶ್ರೀಮತಿ ತುಳಸಿ ಗಾಂಧಿಪ್ರಸಾದ್ ಬಂಗಾರಕೋಡಿ, ಶ್ರೀಮತಿ ಕವಿತಾ ಮಂಜುನಾಥ್ ಬೆಂಗಳೂರು, ಸಹೋದರರಾದ ರುಕ್ಮಯ್ಯ ಗೌಡ ಆನೆಮನೆ, ಲಾವಪ್ಪ ಗೌಡ ಆರಿಕಲ್ಲು, ಧರ್ಮಪಾಲ ಗೌಡ ನಿಂತಿಕಲ್ಲು ಸೇರಿದಂತೆ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಮೃತರಿಗೆ ಪುಷ್ಪನಮನ ಸಲ್ಲಿಸಿದರು.