ಸುಳ್ಯ ರಾಮ ಭಜನಾ ಮಂದಿರದಲ್ಲಿ ಅರ್ಧ ಏಕಾಹ ಭಜನೆ -ದುರ್ಗಾಪೂಜೆ

0

ಸುಳ್ಯ ಶ್ರೀ
ಶ್ರೀ ರಾಮ ಭಜನಾ ಮಂದಿರದಲ್ಲಿ ಡಿ.3 ರಂದು ಅರ್ಧ ಏಕಾಹ ಭಜನೆ ಹಾಗೂ ಸಾರ್ವಜನಿಕ ಶ್ರೀ ದುರ್ಗಾಪೂಜೆಯು ಜರುಗಿತು.
ಪ್ರಾತ:ಕಾಲ ದೀಪಾರಾಧನೆಯಾಗಿ ಮಧ್ಯಾಹ್ನ ಮಹಾಪೂಜೆಯು ನಡೆದು ಪ್ರಸಾದ ವಿತರಣೆಯಾಯಿತು. ಸಂಜೆ ಮಹಾಮಂಗಳಾರತಿಯಾಗಿ ಬಳಿಕ ರಾತ್ರಿ ಸಾರ್ವಜನಿಕ ಶ್ರೀ ದುರ್ಗಾಪೂಜೆಯುನಡೆದು ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು. ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು.


ಸುಳ್ಯ ರಾಮ ಭಜನಾ ಮಂದಿರದ ಸದಸ್ಯರು ಹಾಗೂ ಸ್ಥಳೀಯ ಭಜಕರಿಂದ ಭಜನಾ ಸೇವೆಯು ನಡೆಯಿತು. ಮಂದಿರದ ಆಡಳಿತ ಧರ್ಮದರ್ಶಿ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ,ಸಾಂಸ್ಕೃತಿಕ ಸೇವಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಸಹಕರಿಸಿದರು.