ಡಿ.11 ರವರೆಗೆ ಜಾನಪದ ಕಲಾ ಪ್ರಾಕಾರಗಳ ತರಬೇತಿ ಶಿಬಿರ

0

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲಾ ಪ್ರಾಕಾರಗಳ ತರಬೇತಿಯು ಡಿ.4 ರಂದು ಗುತ್ತಿಗಾರಿನ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವೆಂಕಟ್ ದಂಬೆಕೋಡಿ ನೆರವೇರಿಸಿದರು. ಗ್ರಾ.ಪಂ ಸದಸ್ಯೆ ಮಂಜುಳಾ ಮುತ್ಲಾಜೆ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ವೆಂಕಟ್ ವಳಲಂಬೆ, ಜಿಲ್ಲಾ ಯುವ ಸಬಲೀಕರಣ ಸಹಾಯಕ ನಿರ್ದೇಶಕ ರವಿ ವೈ.ನಾಯಕ್ ಉಪಸ್ಥಿತರಿದ್ದರು. ನೋಡೆಲ್ ಅಧಿಕಾರಿ ದೇವರಾಜ್ ಮುತ್ಲಾಜೆ ಸ್ವಾಗತಿಸಿ ವಂದಿಸಿದರು. ರಮೇಶ್ ಮೆಟ್ಟಿನಡ್ಕ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಈ ತರಬೇತಿ ಶಿಬಿರವು ಡಿ.11 ರವರೆಗೆ ನಿರಂತರವಾಗಿ ನಡೆಯಲಿದೆ.