ಜೀವನ್ ರಾಂ ಸುಳ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ

0
352

ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕೊಡಮಾಡಿದ 2022 ನೇ ಸಾಲಿನ ಗೌರವ ಡಾಕ್ಟರೇಟ್ ಪದವಿಯನ್ನು ಸುಳ್ಯ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ರೂವಾರಿ, ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಮತ್ತು ಯಕ್ಷ ರಂಗಾಯಣ ಕಾರ್ಕಳ ಇದರ ನಿರ್ದೇಶಕರಾದ ಜೀವನ್ ರಾಂ ಸುಳ್ಯರವರಿಗೆ ಪ್ರದಾನ ಮಾಡಲಾಯಿತು.

p>

ಹಾವೇರಿ ಜಿಲ್ಲೆಯ ಶಿಗ್ಗಾಂವ್ ನಲ್ಲಿರುವ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ 6 ನೇ ಘಟಿಕೋತ್ಸವದಲ್ಲಿ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ವರ್ಚ್ವಲ್(ಆನ್ಲೈನ್) ಮೂಲಕ ಪದವಿ ಪ್ರದಾನ ಮಾಡಿದರು.

ವಿ.ವಿ.ಕುಲಪತಿ ಪ್ರೊ| ಟಿ.ಎಂ.ಭಾಸ್ಕರ್ ಪದವಿಯನ್ನು ಹಸ್ತಾಂತರಿಸಿದರು.ಘಟಿಕೋತ್ಸವ ಭಾಷಣ ಮಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ, ವಿ.ವಿ.ಯ ಕುಲಸಚಿವರಾದ ಪ್ರೊ.ಸಿ.ಟಿ.ಗುರುಪ್ರಸಾದ್, ಸಿಂಡಿಕೇಟ್ ಸದಸ್ಯರಾದ ವೆಂಕಟೇಶ್ ಮುಡೂರು ಮೊದಲಾದವರು ಉಪಸ್ಥಿತರಿದ್ದರು.
ಜೀವನ್ ರಾಂರವರು ರಂಗಭೂಮಿ ,ಯಕ್ಷಗಾನ , ಜಾನಪದ, ಸಂಗಿತ ,ಕಲೆ,ಜಾದೂ, ಚಲನಚಿತ್ರ ಹೀಗೆ ಸಮಗ್ರ ಸಾಂಸ್ಕೃತಿಕ ಲೋಕಕ್ಕೆ ನೀಡಿದ ಕೊಡುಗೆಯನ್ನು ಗಮನಿಸಿ ಈ ಗೌರವವನ್ನು ಪ್ರದಾನ ಮಾಡಲಾಯಿತು.

LEAVE A REPLY

Please enter your comment!
Please enter your name here