ಗುತ್ತಿಗಾರು: ಮುತ್ತಪ್ಪ ತಿರುವಪ್ಪ ದೈವಸ್ಥಾನದ ಪ್ರತಿಷ್ಠಾ ಕಲಶಾಭಿಷೇಕ ಸಮಿತಿ ರಚನೆ

0

ಗುತ್ತಿಗಾರಿನ ಮುತ್ತಪ್ಪ ತಿರುವಪ್ಪ ದೈವಸ್ಥಾನದ ಪ್ರತಿಷ್ಠಾ ಕಲಶಾಭಿಷೇಕ ಸಮಿತಿ ರಚನೆಗೊಂಡಿದ್ದು ಸಂಚಾಲಕರಾಗಿ ಚಂದ್ರಶೇಖರ ಕಂದಡ್ಕ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಧಾನ ಕಾರ್ಯದರ್ಶಿಯಾಗಿ ವಿನ್ಯಾಸ್ ಕೊಚ್ಚಿ, ಕೋಶಾಧಿಕಾರಿಯಾಗಿ ಕಿಶೋರ್ ಕುಮಾರ್ ಬೊಮ್ಮದೇರೆ ಹಾಗೂ ಸಹ ಸಂಚಾಲಕರುಗಳಾಗಿ ಅನಿಲ್ ಕುಮಾರ್ ಗುತ್ತಿಗಾರು, ನಿತ್ಯಾನಂದ ಕಾಂತಿಲ, ಜಗದೀಶ ಪೈಕ ಹಾಗೂ ಜತೆ ಕಾರ್ಯದರ್ಶಿಯಾಗಿ ಮಾಧವ ಎರ್ದಡ್ಕ ಅವರನ್ನು ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ಮುತ್ತಪ್ಪ ತಿರುವಪ್ಪ ದೈವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟ್ ವಳಲಂಬೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ವೇದಿಕೆಯಲ್ಲಿ ಕಾರ್ಯದರ್ಶಿ ಮರಿಯಪ್ಪ ಮಾವಂಜಿ ಉಪಸ್ಥಿತರಿದ್ದರು.