ನಾಲ್ಕೂರು : ಜೀರ್ಣೋದ್ಧಾರಗೊಳ್ಳುತ್ತಿದೆ ಅಮೆ ಉಳ್ಳಾಕುಲು ದೈವಸ್ಥಾನ

0

ಸರಿಸುಮಾರು ೮೦೦ ವರ್ಷಗಳಿಂದಲೂ ಹಿಂದಿನದು ಅಕ್ಕಮ್ಮ ಬಳ್ಳಾಳ್ತಿ ಹಾಗೂ ದುಗ್ಗಮ್ಮ ಬಳ್ಳಾಳ್ತಿ ಎಂಬ ಹೆಸರಿನ ಜೈನರ ಆಳ್ವಿಕೆಯ ಅಧೀನದಲ್ಲಿದ್ದು ನಂತರ ಪಾಳು ಬಿದ್ದಿದ್ದು ಎನ್ನಲಾದ ನಾಲ್ಕೂರು ಗ್ರಾಮದ ಅಮೆ ಪಂಜಿಪಳ್ಳ ಹಾಗೂ ಹಲ್ಗುಜ್ಜಿ ಸೇರಿದಂತೆ ಇನ್ನಿತರ ಬೈಲಿಗೆ ಸಂಬಂಧಪಟ್ಟ ಅರಸು ಉಳ್ಳಾಕುಲು ಹಾಗೂ ಪರಿವಾರ ದೈವಗಳ ದೈವಸ್ಥಾನವನ್ನು ಇದೀಗ ಬಯಲಸ್ಥರೆಲ್ಲ ಸೇರಿಕೊಂಡು ಜೀರ್ಣೋದ್ಧಾರಗೊಳಿಸಲು ಮುಂದಾಗಿದ್ದಾರೆ.

ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದ ಪ್ರಕಾರ ಈ ಭಾಗದಲ್ಲಿ ಅರಸು ಉಳ್ಳಾಕುಲು, ಪುರುಷ ದೈವ, ಕಲ್ಕುಡ, ಮನೆ ಕಲ್ಲುರ್ಟಿ, ಬೀರ್ದೇವರು, ದೈಯ್ಯರ್ ಕಟ್ಟೆ, ನಾಗ, ಪಂಜುರ್ಲಿ, ಗುಳಿಗ, ನಾಗ ಚಾಮುಂಡಿ, ಕೂಜಿಗಳು, ಅಮ್ಮಾಜಿ ಕಲ್ಲು, ೫ ಕುಟ್ಟಿ ಮೂರ್ತಿಗಳು, ಭೈರವ ಕುಟ್ಟಿಚಾತ, ಪೊಟ್ಟದೈವ, ಕೊರ್ತಿ, ರಾವ್ ಗುಳಿಗ, ಜೇನುಕೊಡಿ ಮೂಲೆಯಲ್ಲಿ ಜೇನು ದೇವರು ಸೇರಿದಂತೆ ಇನ್ನು ಅನೇಕ ದೈವ ದೇವರುಗಳ ಸ್ಥಾನಗಳು ಜೀರ್ಣೋದ್ಧಾರಗೊಳ್ಳುತ್ತಿವೆ. ಸಂಬಂಧಪಟ್ಟಂತ ಆಯಾಯ ಮನೆಯವರು ಆಯಾಯ ಗ್ರಾಮಸ್ಥರು ಬಯಲಸ್ಥರು ಸೇರಿಕೊಂಡು ಆಡಳಿತ ಮಂಡಳಿ ಜೊತೆಗೆ ಜೀರ್ಣೋದ್ಧಾರ. ಸಮಿತಿಯನ್ನು ರಚಿಸಿಕೊಂಡು ಊರ ಹಾಗೂ ಪರಊರ ದಾನಿಗಳಿಂದ ಧನ ಸಂಗ್ರಹ ಮಾಡಿಕೊಂಡು ಕೆಲಸ ಕಾರ್ಯಗಳು ಬರದಿಂದ ಸಾಗುತ್ತಿದೆ. ಜೊತೆಗೆ ಸಮಾನ ಮನಸ್ಕರು ಸೇರಿಕೊಂಡು ಶ್ರಮದಾನದಂತಹ ಸೇವೆಯನ್ನು ಕೂಡ ಮಾಡುತ್ತಾ ಇದ್ದಾರೆ. ಇನ್ನಷ್ಟು ಹೆಚ್ಚಿನ ಕೆಲಸಗಳು ಬಾಕಿ ಉಳಿದಿದ್ದು ಊರ ಹಾಗೂ ಪರವೂರಿನ ದಾನಿಗಳ ಆರ್ಥಿಕವಾದ ನಿರೀಕ್ಷೆಯಲ್ಲಿದ್ದಾರೆ.
ಬರಹ : ದಿನೇಶ್ ಹಾಲೆಮಜಲು