ಮೆದುಳು ಜ್ವರ/ಜೆಈ/ಜಪಾನೀಸ್ ಎನ್ ಕೆಫಲೈಟಿಸ್ ಅಭಿಯಾನ : ಗಾಂಧಿನಗರದಲ್ಲಿ ಉದ್ಘಾಟನೆ, ಪ್ರತಿಯೊಬ್ಬರು ಲಸಿಕೆ ಪಡೆದು ಆರೋಗ್ಯವಾಗಿರಿ : ಸಚಿವ ಎಸ್.ಅಂಗಾರ

0

ಮಕ್ಕಳ ಭವಿಷ್ಯದ ನಿಟ್ಟಿನಲ್ಲಿ ಸರಕಾರ ಹಲವು ಯೋಜನೆಯನ್ನು ಜಾರಿಗೊಳಿಸುತ್ತಿದೆ. ಮೆದುಳು ಜ್ವರ ಬಾರದಂತೆ ಲಸಿಕಾ ಅಭಿಯಾನ ಕೈಗೊಂಡಿದ್ದು ಪ್ರತಿಯೊಬ್ಬ ಮಕ್ಕಳಿಗೂ ಸರಕಾರ ನೀಡುವ ಈ ಚುಚ್ಚುಮದ್ದು ಸರಕಾರದ ವತಿಯಿಂದ ನೀಡಲಾಗುತ್ತಿದ್ದ ಪ್ರತಿಯೊಬ್ಬರ ಇದರ ಪ್ರಯೋಜನ ಪಡೆದು ಆರೋಗ್ಯವಂತ ರಾಗಿರಬೇಕೆಂದು ಸಚಿವ ಎಸ್.ಅಂಗಾರ ಹೇಳಿದರು.

ತಾಲೂಕು ಆಡಳಿತ, ತಾಲೂಕು ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಅಕೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇದರ ಆಶ್ರಯದಲ್ಲಿ ಜೆಇ ಲಸಿಕಾ ಅಭಿಯಾನಕ್ಕೆ ಗಾಂಧಿನಗರ ಕೆಪಿಎಸ್ ಶಾಲೆಯಲ್ಲಿ ಚಾಲನೆ ನೀಡಿ ಮಾತನಾಡುತ್ತಿದ್ದರು.

ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಮೆದುಲು ಜ್ವರ ಹರಡುವಿಕೆ ಹಾಗೂ ಲಸಿಕಾ ವಿಧಾನದ ಕುರಿತು ಮಾಹಿತಿ ನೀಡಿದರು.
ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅಧ್ಯಕ್ಷತೆ ವಹಿಸಿದ್ದರು.


ತಹಶೀಲ್ದಾರ್ ಅನಿತಾಲಕ್ಷ್ಮೀ, ಸಿಡಿಪಿಒ ಶ್ರೀಮತಿ ರಶ್ಮಿ ಅಶೋಕ್, ನ.ಪಂ. ಸದಸ್ಯರುಗಳಾದ ಶರೀಫ್ ಕಂಠಿ, ಪ್ರವಿತಾ ಪ್ರಶಾಂತ್, ಕೆಪಿಎಸ್ ಮುಖ್ಯೋಪಾಧ್ಯಾಯ ಅರುಣ್ ಕುಮಾರ್, ಕೆಪಿಎಸ್ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪದ್ಮನಾಭ ಅತ್ಯಾಡಿ, ವೈದ್ಯಾಧಿಕಾರಿ ಡಾ.ಗಿರೀಶ್
ಮೊದಲಾದವರಿದ್ದರು.