ಮೇನಾಲ ವಿಷ್ಣು ಯುವಕ ಮಂಡಲ ಪದಗ್ರಹಣ

0

ಅಜ್ಜಾವರ ಗ್ರಾಮದ ಮೇನಾಲ ವಿಷ್ಣು ಯುವಕ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಡಿ.12 ರಂದು ನಡೆಯಿತು.

ವಿಷ್ಣು ಯುವಕ ಮಂಡಲದ ಅಧ್ಯಕ್ಷ ಶ್ರೀಧರ ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು. ಮೇನಾಲ ಕಾಳಿಕ ದುರ್ಗಾಪರಮೇಶ್ವರಿ ದೇವಿ‌ ಕ್ಷೇತ್ರದ ಪದ್ಮನಾಭ ಸ್ವಾಮಿ ಉದ್ಘಾಟನೆ ನೆರವೇರಿಸಿದರು.
ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ತೇಜಸ್ವಿ ಕಡಪಳ ಪ್ರಮಾಣ ವಚನ ಬೋದನೆ ಮಾಡಿದರು.


ಮುಖ್ಯ ಅತಿಥಿಗಳಾಗಿ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಪ್ರಸಾದ್ ರೈ ಮೇನಾಲ, ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ಗುರುರಾಜ್ ಅಜ್ಜಾವರ, ಮೇನಾಲ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಚಂದ್ರ ಪಲ್ಲತಡ್ಕ, ನಿವೃತ್ತ ಪೋಲೀಸ್ ಅಧಿಕಾರಿ ನಾರಾಯಣ ರೈ, ಇಂಜಿನಿಯರ್ ರಾಮ ಬೇಲ್ಯ ವೇದಿಕೆಯಲ್ಲಿದ್ದರು.

ನೂತನ ಅಧ್ಯಕ್ಷ ರಂಜಿತ್ ರೈ ಮೇನಾಲ, ಕಾರ್ಯದರ್ಶಿ ಮೋಹನ್ ಮೂಲ್ಯ, ಕೋಶಾಧಿಕಾರಿ ಕೀರ್ತನ್ ಇರಂತಮಜಲುರವರು ಅಧಿಕಾರ ಸ್ವೀಕರಿಸಿದರು. ಸುಧೀರ್ ರೈ ಮೇನಾಲ, ಹರಿಪ್ರಸಾದ್ ಸುಲಾಯ‌ ಮೊದಲಾದವರಿದ್ದರು.

ಚಂದ್ರಶೇಖರ ಪಲ್ಲತಡ್ಕ ಸ್ವಾಗತಿಸಿದರು. ಸೌಕತ್ ಮೇನಾಲ ಕಾರ್ಯಕ್ರಮ ನಿರೂಪಿಸಿದರು.