ಪಂಜದ ಪಾಂಡಿಗದ್ದೆ ರಸ್ತೆ ಅಭಿವೃದ್ಧಿಪಡಿಸಿದ ಕೆಪಿಸಿಸಿ ಸದಸ್ಯ ಎಚ್ ಎಂ ನಂದಕುಮಾರ್

0

ಕೆಪಿಸಿಸಿ ಸದಸ್ಯ ಹಾಗು ಕಡಬ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಎಚ್.ಎಂ.ನಂದಕುಮಾರ್ ರವರು ಪಂಜದ ಪಾಂಡಿಗದ್ದೆಯಲ್ಲಿ ಸುಮಾರು 300 ಮೀಟರ್ ಉದ್ದಕ್ಕೆ
ರಸ್ತೆಯನ್ನು ಸ್ವಂತ ಖರ್ಚಿನಲ್ಲಿ ಅಭಿವೃದ್ಧಿ ಮಾಡಿದ್ದಾರೆ.

ಐವತ್ತೊಕ್ಲು ಗ್ರಾಮದ ಪಾಂಡಿಗದ್ದೆಯಲ್ಲಿ ಕಡಿದಾದ ಮತ್ತು ಭಾರೀ ಎತ್ತರದಲ್ಲಿ ಇರುವ ರಸ್ತೆಯಲ್ಲಿ ಜನರಿಗೆ ಸಂಚಾರಕ್ಕೆ ಕಷ್ಟಕರವಾಗಿತ್ತು. ರಸ್ತೆಯ ಸಮಸ್ಯೆಯ ಬಗ್ಗೆ ಪಂಜ ಗ್ರಾಮ ಪಂಚಾಯತ್ ಸದಸ್ಯರಾದ ಲಕ್ಷ್ಮಣ ಬೊಳ್ಳಾಜೆ ಮತ್ತು ಶ್ರೀಮತಿ ಮಲ್ಲಿಕಾ ಅಳ್ಪೆ ಅವರು ನಂದಕುಮಾರ್ ಅವರ ಗಮನಕ್ಕೆ ತಂದಿದ್ದರು. ಕೂಡಲೇ ಕಾರ್ಯ ಪ್ರವೃತ್ತರಾದ ನಂದಕುಮಾರ್ ಅವರು ಸ್ವಂತ ಹಣ ಖರ್ಚು ಮಾಡಿ ಹಿಟಾಚಿ ಮತ್ತು ಟಿಪ್ಪರ್ ತಂದು ರಸ್ತೆಯನ್ನು ತಗ್ಗಿಸಿ ಅಭಿವೃದ್ಧಿಪಡಿಸಿದರು. ರಸ್ತೆ ತಗ್ಗಿಸಿ, ಅಗಲೀಕರಣ ಮಾಡಿ ಸುಮಾರು 300 ಮೀಟರ್ ಉದ್ದಕ್ಕೆ ಅಭಿವೃದ್ಧಿ ಪಡಿಸಿ ಸಂಚಾರ ಯೋಗ್ಯವಾಗಿಸಿದರು. ಹಲವು ಮಂದಿ ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿ ನಂದಕುಮಾರ್ ಅವರನ್ನು ಅಭಿನಂದಿಸಿದರು.ಗ್ರಾಮ ಪಂಚಾಯತ್ ಸದಸ್ಯರಾದ ಲಕ್ಷ್ಮಣ ಬೊಳ್ಳಾಜೆ, ಶ್ರೀಮತಿ ಮಲ್ಲಿಕಾ ಮೊದಲಾದವರು ಜೊತೆಗಿದ್ದರು.
: