ಸುಳ್ಯದಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ- ಮಣ್ಣು ಪರೀಕ್ಷಾ ಕೇಂದ್ರದ ಉದ್ಘಾಟನೆ, ಮಣ್ಣಿನ ಸಂರಕ್ಷಣೆ ಕುರಿತು ರೈತರಿಗೆ ವಿಜ್ಞಾನಿಗಳಿಂದ ಮಾಹಿತಿ

0

ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪೆನಿ ಸುಳ್ಯ ಕೇಂದ್ರದ ಆಯೋಜನೆಯಲ್ಲಿ
ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನ ಗಳ ವಿಶ್ವ ವಿದ್ಯಾಲಯ ಬೀದರ್,ಭಾ.ಕೃ.ಅ.ಪ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಸಹಯೋಗದಲ್ಲಿ ಡಿ.5 ರಂದು ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಹಾಗೂ ಮಣ್ಣು ಪರೀಕ್ಷಾ ಕೇಂದ್ರವನ್ನು ಸುಳ್ಯದಲ್ಲಿ ಪ್ರಾರಂಭಿಸಲಾಯಿತು.


ಸುಳ್ಯ ಜೂನಿಯರ್ ಕಾಲೇಜ್ ರಸ್ತೆಯಲ್ಲಿರುವ ತೆಂಗು ರೈತ ಉತ್ಪಾದಕರ ಕಂಪನಿ ಕಚೇರಿ ಬಳಿ ನೂತನ ಮಣ್ಣು ಪರೀಕ್ಷಾ ಕೇಂದ್ರವನ್ನು ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಮಲ್ಲಿಕಾರ್ಜುನ ಎನ್ .
ರವರು ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ವಿಜ್ಞಾನಿ ಡಾ.ಮಲ್ಲಿಕಾರ್ಜುನ ರವರು ಮಣ್ಣಿನ ಆರೋಗ್ಯ ಮತ್ತು ಮಣ್ಣಿನ ಪ್ರಾಮುಖ್ಯತೆ ಬಗ್ಗೆ ಅರಿವು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡು ಅದರ ಸಂರಕ್ಷಣೆಯ ಕಾರ್ಯ ಕೃಷಿಕರಿಂದ ನಡೆಯಬೇಕು. ಮಣ್ಣಿನ ಆರೋಗ್ಯದಿಂದ ಮನುಷ್ಯನ ಆರೋಗ್ಯ ಹಾಗೂ ಆರ್ಥಿಕ ಪರಿಸ್ಥಿತಿ ವೃದ್ಧಿಯಾಗಲು ಸಾಧ್ಯ. ರೈತರು ಮಣ್ಣು ಪರೀಕ್ಷೆ ಸಕಾಲದಲ್ಲಿ ಮಾಡಿದರೆ ಉತ್ತಮ ಫಸಲು ಆದಾಯ ಪಡೆಯಲು ಪೂಕವಾಗುವುದು
ಎಂದು ಅವರು ಕರೆ ನೀಡಿದರು.


ಸುಳ್ಯ ತೋಟಗಾರಿಕೆ ಇಲಾಖೆಯ ಕೃಷಿ ಅಧಿಕಾರಿ ಸುಹನಾ ರವರು ಮಣ್ಣಿನ ಫಲವತ್ತತೆ ಯನ್ನು ಉಳಿಸಿಕೊಳ್ಳುವ ಕುರಿತು ರೈತರಿಗೆ ಮಾಹಿತಿ ನೀಡಿದರು.
ಪ್ರಾಣಿ ಶಾಸ್ತ್ರ ವಿಜ್ಞಾನಿ ಡಾ. ಶಿವಕುಮಾರ್ ರವರು ಮಣ್ಣಿನ
ದುರ್ಬಳಕೆಯಿಂದಾಗಿ ಮಣ್ಣಿನಲ್ಲಿರುವ ಪೋಷಕಾಂಶಗಳ ಕೊರತೆ ಇದರಿಂದಾಗುವ ದುಷ್ಪರಿಣಾಮಗಳ ಕುರಿತು ತಿಳಿಸಿದರು.
ಕಂಪನಿಯ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ಚೇತನ್ ರವರು ಸಂಸ್ಥೆಯ ಚಟುವಟಿಕೆ ಹಾಗೂ ಉತ್ಪನ್ನಗಳ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ದಕ.ಜಿಲ್ಲೆ ತೆಂಗು ರೈತ ಉತ್ಪಾದಕರ ಕಂಪೆನಿಯ ಉಪಾಧ್ಯಕ್ಷ ಕುಸುಮಾಧರ ಗುತ್ತಿಗಾರು ಉಪಸ್ಥಿತರಿದ್ದರು.
ಮಣ್ಣು ಪರೀಕ್ಷಾ ಕೇಂದ್ರದ ಸಿಬ್ಬಂದಿ ಮಿಲಿಶಾ ಮತ್ತು ಜಯಪ್ರದಾ ರವರಿಗೆ ಅಧಿಕೃತ ಸರ್ಟಿಫಿಕೇಟ್ ವಿತರಿಸಲಾಯಿತು. ಕುಸುಮಾಧರ ಗುತ್ತಿಗಾರು ವಂದಿಸಿದರು.
ಕು.ಮಿಲಿಶಾ ಪುತ್ತೂರು
ಸ್ವಾಗತಿಸಿ ,ಕಾರ್ಯಕ್ರಮ ನಿರೂಪಿಸಿದರು. ತಾಲೂಕಿನ ಕೃಷಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.